", "articleSection": "Entertainment,Crime,Cinema,News", "image": { "@type": "ImageObject", "url": "https://prod.cdn.publicnext.com/s3fs-public/421698-1753787329-10~1.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "SrinivasCrimeBng" }, "editor": { "@type": "Person", "name": "suman.k" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಬೆಂಗಳೂರು : ನಟ ದರ್ಶನ್ ಅಭಿಮಾನಿಗಳು ಜೀವ ಬೆದರಿಕೆ ಹಾಕಿದ್ದಾರೆ ಎಂಬ ಆರೋಪದ ಮೇಲೆ ನಟ ಪ್ರಥಮ್, ಬೆಂಗಳೂರು ಗ್ರಾಮಾಂತರ ಎಸ್ಪಿ ಸಿ.ಕೆ. ಬಾಬ ಅವರ...Read more" } ", "keywords": "Actor Pratham Darshan fans complaint, Pratham fast unto death warning, Darshan fans harassment Pratham, Bengaluru actor complaint SP, Pratham police complaint Darshan fans Pratham cyberbullying complaint, Actor Pratham protest Darshan fans, Harassment by fan clubs Karnataka, Pratham social media abuse, SP complaint against Darshan fans, Film industry fan behavior Bengaluru, Sandalwood actor protest, Pratham Darshan controversy, Online abuse Kannada actors", "url": "https://dashboard.publicnext.com/node" } ಬೆಂಗಳೂರು : ದರ್ಶನ್ ಫ್ಯಾನ್ಸ್ ವಿರುದ್ಧ ಎಸ್ಪಿಗೆ ನಟ ಪ್ರಥಮ್ ದೂರು - "ಅಮರಣಾಂತರ ಉಪವಾಸ" ಎಚ್ಚರಿಕೆ!
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು : ದರ್ಶನ್ ಫ್ಯಾನ್ಸ್ ವಿರುದ್ಧ ಎಸ್ಪಿಗೆ ನಟ ಪ್ರಥಮ್ ದೂರು - "ಅಮರಣಾಂತರ ಉಪವಾಸ" ಎಚ್ಚರಿಕೆ!

ಬೆಂಗಳೂರು : ನಟ ದರ್ಶನ್ ಅಭಿಮಾನಿಗಳು ಜೀವ ಬೆದರಿಕೆ ಹಾಕಿದ್ದಾರೆ ಎಂಬ ಆರೋಪದ ಮೇಲೆ ನಟ ಪ್ರಥಮ್, ಬೆಂಗಳೂರು ಗ್ರಾಮಾಂತರ ಎಸ್ಪಿ ಸಿ.ಕೆ. ಬಾಬ ಅವರಿಗೆ ಅಧಿಕೃತವಾಗಿ ದೂರು ಸಲ್ಲಿಸಿದ್ದಾರೆ.

ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರಥಮ್, "ಇದು ನನ್ನ ಜೀವನದ ಅತ್ಯಂತ ಮಹತ್ವದ ನಿರ್ಧಾರ. ನಾನು ತಡವಾಗಿ ದೂರು ನೀಡಿದ್ದು ದರ್ಶನ್ ಅವರ ಕೇಸ್‌ಗೆ ತೊಂದರೆ ಆಗಬಾರದು ಎಂಬ ಕಾರಣದಿಂದ, ಅವರ ಅಭಿಮಾನಿಗಳು ಇದನ್ನು ಅರ್ಥಮಾಡಿಕೊಳ್ಳಬೇಕು ಎಂದರು.

ಅಲ್ಲಿ ಡ್ರಾಗರ್ ತಂದಿದ್ದು, ದರ್ಶನ್ ಅವರ ಬ್ಯಾರಕ್ ಅಲ್ಲಿ ಇದ್ದವರು, ಅಂದಾಭಿಮಾನಿಗಳು ಏನೂ ಕಿತ್ಕೊಳಕಾಗಲ್ಲ, ಎಲ್ಲರಿಗೂ ಗೊತ್ತಿದೆ. ಅವರದ್ದು ವಿಗ್ ಎಂದು ಆ ವಿಗ್‌ನಲ್ಲಿ ಏನು‌ ಕಿತ್ತುಕೊಳ್ಳಲಿ, ದರ್ಶನ ಅವರು ಎಸ್‌ಪಿ ಕಚೇರಿಗೆ ಬಂದು ಅಭಿಮಾನಿಗಳಿಗೆ ಬುದ್ದಿ ಹೇಳಲಿ ಎಂದರು.

ಪ್ರಥಮ್ ಈ ಸಂಬಂಧ ಗಂಭೀರ ಎಚ್ಚರಿಕೆ ನೀಡಿ, "ಇಂದಿನಿಂದ ನಾನು ಅಮರಣಾಂತರ ಉಪವಾಸಕ್ಕೆ ಕುಳಿದಿದ್ದೇನೆ. ದರ್ಶನ್ ಅವರು ಬಂದು ತಮ್ಮ ಅಭಿಮಾನಿಗಳಿಗೆ ಬುದ್ಧಿವಾದ ಹೇಳಬೇಕು. ಯಶ್, ಶಿವಣ್ಣ ಅಥವಾ ಅಶ್ವಿನಿ ಅವರ ಬಗ್ಗೆ ಅಭಿಮಾನಿಗಳಿಂದ ಟ್ರೋಲ್ ಆಗುವುದು ಸರಿಯಲ್ಲ" ಎಂದು ಹೇಳಿದ್ದಾರೆ.

ಪ್ರಥಮ್ ತಮ್ಮ ಮೇಲಿನ ಟ್ರೋಲ್‌ಗಳ ಬಗ್ಗೆ ಮಾತನಾಡುತ್ತಾ, “ಅಭಿಮಾನಿಗಳ ಪೇಜ್‌ಗಳಿಂದ ನನ್ನ ಬಗ್ಗೆ ನೂರಾರು ಬೆದರಿಕೆ ಸಂದೇಶಗಳು ಬರುತ್ತಿವೆ. ನನ್ನ ಬಾಡಿಗೆ ಮನೆ ಬಗ್ಗೆ ಕೀಳಾಗಿ ಟೀಕೆ ಮಾಡಿದ್ದಾರೆ. ಅವರು ಯಾರಿಗೆಲ್ಲಾ ಎಷ್ಟು ಪ್ರಮಾಣದ ಹಾನಿ ಮಾಡುತ್ತಿದ್ದಾರೆ ಎಂಬುದನ್ನು ಜನರು ನೋಡಬೇಕು,” ಎಂದರು.

“ನನಗೆ ಏನಾದರೂ ಆಗಿದ್ರೆ, ದರ್ಶನ್ ಅವರೇ ಕಾರಣ. ಅವರು ಈ ವಿಷಯದಲ್ಲಿ ಮೌನವಿರಬಾರದು. ಅವರ ಅಭಿಮಾನಿಗಳು ಹೇಯ್.. ಬಾರೋಲೋ ಎಂದು ಕರೆದು, ನಾನು ನಟರ ಬಗ್ಗೆ ಮಾತನಾಡಿದ್ದಕ್ಕೆ ಚುಚ್ಚಿ ಬಿಡುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ ಎಂದಿದ್ದಾರೆ.

"ಇನ್ನೊಂದು ಸಾರಿ ನನ್ನ ಬಗ್ಗೆ ಮಾತಾಡಿದ್ರೆ, ನಾನು ಯಾವುದೇ ಹಂತಕ್ಕೆ ಇಳಿಯುತ್ತೇನೆ" ಎಂದು ಅಂತಿಮವಾಗಿ ಎಚ್ಚರಿಕೆ ನೀಡಿದ್ದಾರೆ.

Edited By : Suman K
PublicNext

PublicNext

29/07/2025 04:39 pm

Cinque Terre

41.04 K

Cinque Terre

4

ಸಂಬಂಧಿತ ಸುದ್ದಿ