", "articleSection": "Crime,Law and Order", "image": { "@type": "ImageObject", "url": "https://prod.cdn.publicnext.com/s3fs-public/405356-1757329903-enne.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "VinayakHubballi" }, "editor": { "@type": "Person", "name": "Vinayak.Patil" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಹುಬ್ಬಳ್ಳಿ: ನಗರದ ಕಾರವಾರ ರಸ್ತೆಯಲ್ಲಿರುವ ಶೆಟ್ಟಿ ವೈನ್ಸ್ ಬಾರ್ ಮುಂದೆಯೇ ರವಿವಾರ ಕ್ಷುಲ್ಲಕ ವಿಚಾರಕ್ಕೇ ಮೂವರು ಹೊಡೆದಾಡಿಕೊಂಡ ಪರಿಣಾಮ ಓರ್ವ...Read more" } ", "keywords": "Hubballi bar fight, bike accident, injured in bike fall, Hubballi news, street fight outside bar, bike accident news, Hubballi police case, public altercation.", "url": "https://dashboard.publicnext.com/node" }
ಹುಬ್ಬಳ್ಳಿ: ನಗರದ ಕಾರವಾರ ರಸ್ತೆಯಲ್ಲಿರುವ ಶೆಟ್ಟಿ ವೈನ್ಸ್ ಬಾರ್ ಮುಂದೆಯೇ ರವಿವಾರ ಕ್ಷುಲ್ಲಕ ವಿಚಾರಕ್ಕೇ ಮೂವರು ಹೊಡೆದಾಡಿಕೊಂಡ ಪರಿಣಾಮ ಓರ್ವನಿಗೆ ಗಾಯವಾದ ಘಟನೆ ಹಳೇ ಹುಬ್ಬಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕಾರವಾರ ರಸ್ತೆಯಲ್ಲಿನ ಶೆಟ್ಟಿ ವೈನ್ಸ್ ಬಾರ್ ಮುಂದೆ ಸೋಮವಾರ ರಾತ್ರಿ ಮದ್ಯ ಸೇವನೆ ಮಾಡಲು ಬಂದಿದ್ದ ಕೆಲವು ಯುವಕರ ನಡುವೆ ಕ್ಷುಲ್ಲಕ ವಿಚಾರಕ್ಕೇ ಮಾತಿಗೆ ಮಾತು ಬೆಳೆದಿದೆ. ಆಗ ಓರ್ವ ಯುವಕ ಇನ್ನೊಬ್ಬ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ ಪರಿಣಾಮ ಓರ್ವ ಯುವಕ ಬೈಕ್ ಮೇಲೆ ಬಿದ್ದು ಗಾಯಗೊಂಡಿದ್ದಾನೆ.
ಈ ವೇಳೆ ಜಗಳ ತೆಗೆದಿದ್ದ ಇಬ್ಬರು ಅಲ್ಲಿಂದ ಪರಾರಿಯಾಗಿದ್ದಾರೆ. ಗಲಾಟೆ ಹೆಚ್ಚಾಗುತ್ತಿದ್ದ ಹಾಗೇ ಸ್ಥಳದಲ್ಲಿ ಸಾರ್ವಜನಿಕರು ಸೇರಿ ಹೊಡೆದಾಡುತ್ತಿದ್ದ ಯುವಕರನ್ನು ಬಿಡಿಸಿ ಕಳುಹಿಸಿದ್ದಾರೆ. ಈ ಎಲ್ಲಾ ದೃಶ್ಯಗಳು ಅಲ್ಲೇ ಇದ್ದ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಹಳೇ ಹುಬ್ಬಳ್ಳಿ ಪೊಲೀಸರು ದೃಶ್ಯಾವಳಿಗಳ ಆಧರಿಸಿ ಆರೋಪಿಗಳ ಪತ್ತೆಗೆ ಮುಂದಾಗಿದ್ದಾರೆ.
ವಿನಯ್ ರೆಡ್ಡಿ, ಪಬ್ಲಿಕ್ ನೆಕ್ಸ್ಟ್, ಹುಬ್ಬಳ್ಳಿ
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
08/09/2025 04:41 pm