ಚಳ್ಳಕೆರೆ: ವ್ಯಾಪಾರಕ್ಕೆ ಆಕ್ರಮಿಸಿಕೊಂಡ ಪಾದಚಾರಿ ರಸ್ತೆ, ಖಾಸಗಿ ಬಸ್ ನಿಲ್ದಾಣದಲ್ಲಿ ಅಡ್ಡದಿಡ್ಡಿ ಸಂಚಾರ ಮಾಡುತ್ತಿದ್ದ ಆಟೋ ರಿಕ್ಷಾಗಳಿಗೆ ಬ್ರೇಕ್ ಹಾಕಲು ಬುಧವಾರ ಸಂಜೆ 4 ಗಂಟೆ ಸಮಯದಲ್ಲಿ ಪೋಲಿಸ್ ಇಲಾಖೆ ಅಧಿಕಾರಿಗಳು ಮುಂದಾಗಿದ್ದಾರೆ.
ಹೌದು ಚಳ್ಳಕೆರೆ ನಗರದ ಪಾದಚಾರಿ ರಸ್ತೆ ಆಕ್ರಮಿಸಿಕೊಂಡು ವ್ಯಾಪಾರ,ಖಾಸಗಿ ಬಸ್ ನಿಲ್ದಾಣ ಸೇರಿದಂತೆ ರಸ್ತೆಯಲ್ಲಿ ಆಟೋಗಳ ಅಡ್ಡದಿಡ್ಡಿ ಸಂಚಾರದಿಂದ ಟ್ರಾಫಿಕ್ ಕಿರಿಕಿರಿಯಾಗುವುದನ್ನು ಬತಪ್ಪಿಸಲು ಠಾಣಾಧಿಕಾರಿ ಕೆ.ಕುಮಾರ್ ಹಾಗೂ ಸಿಬ್ಬಂದಿಗಳು ತೆರವುಗೊಳಿಸಲು ಮುಂದಾಗಿದ್ದು. ಸಂಚಾರ ನಿಯಮ ಉಲ್ಲಂಘಿಸಿದ ಸುಮಾರು 50 ಕ್ಕೂ ಹೆಚ್ಚು ಆಟೋಗಳಿಗೆ ದಂಡದ ಬಿಸಿ ಮುಟ್ಟಿಸಿದ್ದಾರೆ.
ಪಾದಚಾರಿ ರಸ್ತೆ ತೆರವು ನಗರಸಭೆ ಹಾಗೂ ಪೋಲಿಸ್ ಇಲಾಖೆ ಸಂಯುಕ್ತಾಶ್ರಯದಲ್ಲಿ ನಾಳೆಯೂ ತೆರವು ಕಾರ್ಯಾಚರಣೆ ಮುಂದುವರೆಯಲಿದೆ. ಅದಕ್ಕೆ ಸಾರ್ವಜನಿಕರು ಸಹ ಸಹಕಾರಿಸುವಂತೆ ಠಾಣಾಧಿಕಾರಿ ಕೆ.ಕುಮಾರ್ ಮನವಿ ಮಾಡಿಕೊಂಡಿದ್ದಾರೆ.
PublicNext
15/10/2025 08:03 pm
LOADING...