ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ : ಸ್ಕಾಲರ್'ಶಿಪ್ ಪಡೆಯಲು ಸರ್ವರ್ ಸಮಸ್ಯೆ ! ಪರೀಕ್ಷಾ ಸಮಯದಲ್ಲೇ ವಿದ್ಯಾರ್ಥಿಗಳ ಪರದಾಟ

ಹುಬ್ಬಳ್ಳಿ : SSP ಪೋಸ್ಟ್ ಮೆಟ್ರಿಕ್ ಸ್ಕಾಲರ್'ಶಿಪ್ ಪಡೆಯುವುದಕ್ಕಾಗಿ ದತ್ತಾಂಶ ಒದಗಿಸಲು ಕಳೆದ 3 ದಿನಗಳಿಂದ ಇಲಾಖೆ ಮುಂದೆ ವಿದ್ಯಾರ್ಥಿಗಳು ಸಾಲುಗಟ್ಟಿ ನಿಲ್ಲುವ ದುಸ್ಥಿತಿ ಹುಬ್ಬಳ್ಳಿಯಲ್ಲಿ ಏರ್ಪಟ್ಟಿದೆ.

ಹೌದು ! ಹುಬ್ಬಳ್ಳಿ ಮಿನಿ ವಿಧಾನಸೌಧದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ 2020 ರಿಂದ 2026ರ ವರೆಗೆ ಆಧಾರ್ ಕೌನ್ಸಿಲಿಂಗ್ ಡಿಟೇಲ್ಸ್ ಮತ್ತು ಶೈಕ್ಷಣಿಕ ವರ್ಷದ ಫಲಿತಾಂಶ ದತ್ತಾಂಶ ಒಪ್ಪಿಸಲು ವಿದ್ಯಾರ್ಥಿಗಳಿಗೆ ಕರೆ ಬಂದಿದೆ ಅಂತೆ. ಈ ಕಾರಣ ಇಲ್ನೋಡಿ ಈ ಪಾಟಿ ವಿದ್ಯಾರ್ಥಿಗಳ ದಂಡೇ ಕಚೇರಿಯತ್ತ ಆಗಮಿಸಿ ತಮ್ಮ ಪರೀಕ್ಷಾಭ್ಯಾಸದ ಸಮಯವನ್ನು ಸರದಿ ಸಾಲಿನಲ್ಲಿ ವ್ಯರ್ಥ ಮಾಡುವ ಪರಿಸ್ಥಿತಿ ಉಂಟಾಗಿದೆ.

ಈ ಬಗ್ಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿಗಳನ್ನು ಕೇಳಿದ್ರೆ ವಿದ್ಯಾರ್ಥಿಗಳು ದತ್ತಾಂಶ ಸಲ್ಲಿಸುವ ಆನ್ಲೈನ್ ಸರ್ವರ್ ತಟಸ್ಥವಾಗಿ ಇಲಾಖೆಗೆ ಬಂದು ಕೊಡುವ ಅನಿವಾರ್ಯತೆ ಇದೆ ಎಂದಿದ್ದಾರೆ. ಈ ಆನ್ಲೈನ್ ಸರ್ವರ್ ಸಮಸ್ಯೆ ಕಾರಣ ಪರೀಕ್ಷಾ ಸಮಯದಲ್ಲಿ ಓದಬೇಕಾದ ವಿದ್ಯಾರ್ಥಿಗಳು ಸಾಲುಗಟ್ಟಿ ನಿಂತಿದ್ದಕ್ಕೆ ಪಾಲಕರು ಸಹ ಬೇಸರ ವ್ಯಕ್ತಪಡಿಸಿದ್ದಾರೆ.

ಒಟ್ಟಾರೆ SSP ಆನ್ಲೈನ್ ಸಮಸ್ಯೆ ಕಾರಣ ವೃತ್ತಿಪರ ಕೋರ್ಸ್ ವಿದ್ಯಾರ್ಥಿಗಳಿಗೆ ತಲೆನೋವಾಗಿ ಪರಿಣಮಿಸಿ ಎಲ್ಲವೂ ಫ್ರೀ..! ಫ್ರೀ..! ಎನ್ನುವ ಸರ್ಕಾರ ಸಮಸ್ಯೆಗೆ ಉತ್ತರಿಸಲಿ ಎನ್ನುತ್ತಿದ್ದಾರೆ ಪಾಲಕರು.

Edited By :
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

30/01/2026 08:14 pm

Cinque Terre

102.85 K

Cinque Terre

0

ಸಂಬಂಧಿತ ಸುದ್ದಿ