ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೊಡಗು: ವಿಬಿಜಿ ರಾಮ್‌ಜಿ ಯೋಜನೆ ಬಗ್ಗೆ ಕಾಂಗ್ರೆಸ್‌ಗೆ ಮಾಹಿತಿ ಕೊರತೆ - ಪ್ರೀತಂಗೌಡ ತೀವ್ರ ಆಕ್ರೋಶ!

ಮಡಿಕೇರಿ: ವಿಬಿ ಜಿ ರಾಮ್ ಜಿ ಯೋಜನೆ ವಿರುದ್ಧ ಕಾಂಗ್ರೆಸ್ ಜಾಹೀರಾತು ವಿಚಾರಕ್ಕೆ ಮಡಿಕೇರಿಯಲ್ಲಿ ಮಾಜಿ ಶಾಸಕ ಪ್ರೀತಂ ಪ್ರತಿಕ್ರಿಯೆ ನೀಡಿದರು. ಕಾಂಗ್ರೆಸ್ ನ ರಾಷ್ಟ್ರೀಯ ಅಥವಾ ರಾಜ್ಯದ ನಾಯಕರಿಗೆ ಮಾಹಿತಿ ಕೊರತೆ ಇದೆ. ಅಥವಾ ಜಾಣ್ಮೆಯ ಮರೆವು ಇರಬಹುದು.

ಲೋಕಸಭಾ ಅಧಿವೇಶನದಲ್ಲಿ ಉತ್ತರ ಕೊಡುವಾಗ ಅದನ್ನು ಕೇಳಿಸಿಕೊಳ್ಳುವ ಸಮಾಧಾನ ಇರಲಿಲ್ಲ, ಕಾಂಗ್ರೆಸ್ ಸರ್ಕಾರದ ಸಚಿವರಿಗೆ ವಿಬಿಜಿ ರಾಮ್ ಜಿ ಯೋಜನೆ ಬಗ್ಗೆ ಕಲ್ಪನೆಯೂ ಗೊತ್ತಿಲ್ಲ. ಹಾಗಾಗಿ ನಾವು ಜಾಬ್ ಕಾರ್ಡುದಾರರಿಗೆ ಇದರ ಮಾಹಿತಿ ನೀಡಲಿದ್ದೇವೆ. ಆ ಮೂಲಕ ನಾವು ಕಾಂಗ್ರೆಸ್ ಗೆ ಉತ್ತರ ಕೊಡುತ್ತೇವೆ.

ಈ ಕಾರ್ಯಕ್ರಮದ ಮೂಲಕ ಗ್ರಾಮ ಭಾರತಕ್ಕೆ ಹೊಸ ಕಾಯಕಲ್ಪ ಕೊಡಲಿದೆ. ಆ ನಿಟ್ಟಿನಲ್ಲಿ ಪ್ರಧಾನಿಯವರ ಆಲೋಚನೆ ಇದೆ. ಬರುವಂತ ದಿನಗಳಲ್ಲಿ ಇದರ ಬಗ್ಗೆ ಕಾಂಗ್ರೆಸ್ ಗೂ ಮನವರಿಕೆ ಆಗಲಿದೆ. ಜಾಬ್ ಕಾರ್ಡ್ ಹೋಲ್ಡರ್ ಗೆ ಇದೆಲ್ಲ ಅರ್ಥ ಆದ ಮೇಲೆ ಕಾಂಗ್ರೆಸ್ ತಾವೇ ಆಡಿದ ಮಾತನ್ನು ತಾವೇ ನುಂಗಿಕೊಳ್ಳಬೇಕಾಗುತ್ತೆ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಮಾಜಿ ಶಾಸಕ ಪ್ರೀತಂಗೌಡ ವಾಗ್ದಾಳಿ ನಡೆಸಿದರು.

Edited By :
PublicNext

PublicNext

30/01/2026 10:56 pm

Cinque Terre

12.31 K

Cinque Terre

0

ಸಂಬಂಧಿತ ಸುದ್ದಿ