ಮಡಿಕೇರಿ: ಉದ್ಯಮಿ ಸಿಜೆ ರಾಯ್ ಆತ್ಮಹತ್ಯೆಗೆ ಐಟಿ ಅಧಿಕಾರಿಗಳೆ ನೇರ ಹೊಣೆ ಅವರನ್ನೆ ತಪ್ಪಿತಸ್ಥರನ್ನಾಗಿಸ ಬೇಕೆಂದು ಕಾಂಗ್ರೆಸ್ ವಕ್ತಾರ ಎಂ.ಲಕ್ಷ್ಮಣ್ ವಾಗ್ದಾಳಿ ನಡೆಸಿದ್ದಾರೆ.
ಮಡಿಕೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ವಕ್ತಾರ ಎಂ.ಲಕ್ಷ್ಮಣ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಸ್ವಾಯತ್ತ ಸಂಸ್ಥೆಗಳನ್ನ ಬಿಜೆಪಿ ವಿಪಕ್ಷಗಳ ಸದ್ದು ಅಡಗಿಸಲು ಬಳಸುತ್ತಿದೆ ಅದಕ್ಕೆ ಉದಾಹರಣೆ ಅಂದ್ರೆ ಅದು ಸಿ ಜೆ ರಾಯ್ ಅವರ ಆತ್ಮಹತ್ಯೆ ಸಿ ಜೆ ರಾವ್ ಅವರ ಆತ್ಮಹತ್ಯೆಗೆ ನೇರವಾಗಿ ಐಟಿ ಅಧಿಕಾರಿಗಳೇ ಕಾರಣರಾಗಿದ್ದಾರೆ. ಐಟಿ, ಇಡಿ, ಸಿಬಿಐ & ಎನ್ಐಎ ದಾಳಿಗಳೆಲ್ಲವೂ ರಾಜಕೀಯ ಪ್ರೇರಿತ ಇಡಿಯ 6500 ಪ್ರಕರಣಗಳ ಪೈಕಿ ಒಂದರಲ್ಲಿ ಕೂಡ ಬಿಜೆಪಿಯವರಿಲ್ಲ ಶೇ.85 ವಿಪಕ್ಷದವರು, ಶೇ.25 ವಿಪಕ್ಷಗಳ ಬೆಂಬಲಿಗರ ವಿರುದ್ಧದ ಕೇಸುದಾಖಲಾಗಿದೆ.ಇಡಿಯ ಒಟ್ಟು 6500 ಕೇಸುಗಳಲ್ಲಿ 56 ಕೇಸ್ಗಳಲ್ಲಿ ಮಾತ್ರ ಕನ್ವಿಕ್ಟ್ ಆಗಿವೆ.
15636 ಐಟಿ ದಾಳಿಗಳು ನಡೆದಿದ್ದು, 522 ಕೇಸುಗಳಲ್ಲಿ ಮಾತ್ರ ಶಿಕ್ಷೆ ಆಗಿದೆ ಆದಾನಿ ಅಂಬಾವಿ ವಿರುದ್ಧ ಒಂದೇ ಒಂದು ಕೇಸು ಕೂಡ ಐಟಿಯಲ್ಲಿಲ್ಲ. ಆದಾಯ ತೆರಿಗೆಯಲ್ಲಿ ಶೇ.100ರಷ್ಟು ಸರಿ ಇದ್ದಾರ ಅಂದಾನಿ ಅಂಬಾನಿ? ಎಂದು ಮಡಿಕೇರಿಯಲ್ಲಿ ಬಿಜೆಪಿ ವಿರುದ್ಧ ಕಾಂಗ್ರೆಸ್ ವಕ್ತಾರ ಲಕ್ಷ್ಮಣ್ ವಾಗ್ದಾಳಿ ನಡೆಸಿದ್ದಾರೆ.
Kshetra Samachara
01/02/2026 10:37 am
LOADING...