ನವಲಗುಂದ: ಇಂದು ಬೇರೆ ವಿಷಯಗಳಿಗಿಂತ ವಿಜ್ಞಾನ ಮತ್ತು ತಂತ್ರಜ್ಞಾನ ತುಂಬಾ ವೇಗವಾಗಿ ಪ್ರಗತಿಯತ್ತ ಸಾಗುತ್ತಿದೆ. ಈ ರೀತಿ ಹಿಂದಿನ ತಲೆಮಾರುಗಳಲ್ಲಿ ಇರಲಿಲ್ಲ. ಮುಂದಿನ ತಲೆಮಾರುಗಳಲ್ಲಿ ಇನ್ನಷ್ಟು ಬದಲಾವಣೆಯನ್ನು ಕಾಣುತ್ತೇವೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಉಮೇಶ್ ಬೊಮ್ಮಕ್ಕನವರ ಹೇಳಿದರು.
ಪಟ್ಟಣದ ಕನ್ನಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ರಾಷ್ಟ್ರೀಯ ಗಣಿತ ಹಾಗೂ ವಿಜ್ಞಾನ ದಿನಾಚರಣೆ ಅಂಗವಾಗಿ ಶಾಲಾ ಮಕ್ಕಳಿಗೋಸ್ಕರ ಸ್ವಾಮಿ ವಿವೇಕಾನಂದ ಯೂತ್ ಮೂಮೆಂಟನಿಂದ ಆಯೋಜಿಸಿದ್ದ ವಿಜ್ಞಾನ ಪ್ರಯೋಗಗಳ ಸ್ಪರ್ಧೆ ಆವಿಷ್ಕಾರ -2026 ಉದ್ಘಾಟಿಸಿ ಮಾತನಾಡಿದ ಅವರು ವಿಜ್ಞಾನ ಕ್ಷೇತ್ರದಲ್ಲಿ ಯುವ ವಿಜ್ಞಾನಿಗಳನ್ನು ಎಲ್ಲರೂ ನೋಡಿದ್ದೇವೆ. ವಿಜ್ಞಾನ ಆಸಕ್ತಿ ಇರುವ ವಿದ್ಯಾರ್ಥಿಗಳಿಗೆ ಮುಂದಿನ ದಿನಗಳಲ್ಲಿ ಉತ್ತಮ ಆವಕಾಶಗಳು ದೊರೆಯುತ್ತವೆ. ಇನ್ನೂ ನಾವು ಆಚರಿಸುವ ಪ್ರತಿಯೊಂದು ಹಬ್ಬಗಳಲ್ಲಿಯೂ ವೈಜ್ಞಾನಿಕ ಅಂಶ ಅಡಕವಾಗಿದೆ. ಹಬ್ಬಗಳನ್ನು ಏಕೆ ಆಚರಣೆ ಮಾಡುತ್ತೇವೆ ಎಂಬುದನ್ನು ಹಿರಿಯರನ್ನು, ಶಿಕ್ಷಕರನ್ನು ಕೇಳಿ ತಿಳಿದುಕೊಳ್ಳಿ. ಮುಂದೆ ಬರುತ್ತಿರುವ ಯುಗಾದಿ ಹಬ್ಬದ ಸತ್ಯ, ವೈಜ್ಞಾನಿಕ ಆಚರಣೆ ಕುರಿತು ಪತ್ರ ಬರೆದು ನವಲಗುಂದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ಕಳುಹಿಸಿಕೊಡಿ, ಉತ್ತಮವಾಗಿ ಬರೆದವರಿಗೆ ಬಹುಮಾನ ಕೊಡುತ್ತೇವೆ ಎಂದರು.
ಇದೆ ವೇಳೆ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಅಭ್ಯಾಸ ಪುಸ್ತಕ ವಿತರಿಸಿ, ಅಂತರ ಶಾಲಾ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿಪತ್ರ ವಿತರಿಸಲಾಯಿತು.
Kshetra Samachara
31/01/2026 12:33 pm
LOADING...