ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಒಗ್ಗಟ್ಟಾಗಿದ್ದರೇ ಮಾದಿಗರ ಬೇಡಿಕೆ ಈಡೇರಲು ಸಾಧ್ಯ; ಸಚಿವ ತಿಮ್ಮಾಪುರ

ಧಾರವಾಡ: ಮಾದಿಗ ಸಮಾಜದವರಲ್ಲಿ ಒಗ್ಗಟ್ಟು ಮೂಡಿದರೆ ಮಾತ್ರ ನಮ್ಮ ಬೇಡಿಕೆಗಳು ಈಡೇರಲು ಸಾಧ್ಯ ಎಂದು ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಹೇಳಿದರು.

ಅವರು ನಗರದ ಬಿ.ಡಿ. ಪಾಟೀಲ ಕನ್ವೆನ್‌ಷನ್ ಹಾಲ್‌ನಲ್ಲಿ ರವಿವಾರ ನಡೆದ ರಾಜ್ಯ ಮಟ್ಟದ ಮಾದಿಗ ವಕೀಲರ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.

ಮಾದಿಗ ಸಮಾಜದ ಸಂಘಟನೆ ಗಟ್ಟಿಗೊಳ್ಳಬೇಕು. ರಾಜಕೀಯ ಶಕ್ತಿಯಿಂದ ಮಾತ್ರ ಸಮಾಜದ ಬೇಡಿಕೆಗಳು ಈಡೇರಲು ಸಾಧ್ಯ. ಆಸಕ್ತರು ರಾಜಕೀಯಕ್ಕೆ ಬರಬೇಕು ಎಂದರು.

ಒಳ ಮೀಸಲಾತಿಗೆ ನಡೆಯುತ್ತಿರುವ ಹೋರಾಟ ಸಮಾಜದ ಒಗ್ಗಟ್ಟನ್ನು ತೋರಿಸುತ್ತದೆ. ಹೋರಾಟ ತೀವ್ರಗೊಳ್ಳಲು ಮಾದಿಗ ವಕೀಲರ ಸಂಘ ಮುಖ್ಯ ಕಾರಣ ಎಂದರು.

ಸಾನಿಧ್ಯ ವಹಿಸಿದ್ದ ಶ್ರೀ ಮಾದಾರ ಚನ್ನಯ್ಯ ಸ್ವಾಮೀಜಿ ಮಾತನಾಡಿ, ಒಳ ಮೀಸಲಾತಿ ಕುರಿತ ಗೊಂದಲಗಳು ನಿವಾರಣೆಯಾಗಬೇಕು. ಸರಕಾರ ಮಾದಿಗರಿಗೆ ನ್ಯಾಯ ಒದಗಿಸುವ ಭರವಸೆಯಿದೆ ಎಂದು ನುಡಿದರು.

ಮಾಜಿ ಶಾಸಕ

Edited By : Shivu K
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

01/02/2026 10:34 pm

Cinque Terre

29.71 K

Cinque Terre

0

ಸಂಬಂಧಿತ ಸುದ್ದಿ