ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ : ಮೂರು ವರ್ಷಕ್ಕೊಮ್ಮೆ ನಡೆಯುವ ಜಾತ್ರೆಗೆ ಊರಿಗೆ ಊರೇ ಖಾಲಿ- ಮನೆಗೆ ಬೀಗ ಹಾಕಿ ಹೋಗುತ್ತಿರುವ ಜನರು

ಕಲಘಟಗಿ : ಇದೇನು ಇಲ್ಲಿಯ ಜನರು ತಲೆಯ ಮೇಲೆ ಗಂಟು ಹೊತ್ತು ಕೈಯಲ್ಲಿ ಚೀಲ ಹಿಡಿದುಕೊಂಡು ಮನೆಗೆ ಬೀಗ ಹಾಕಿ ಎಲ್ಲಿಗೆ ಹೋಗುತ್ತಿದ್ದಾರೆ ಅಂತ ನೋಡ್ತಾ ಇದಿರಾ ಅದನ್ನ ನಾವು ಹೇಳ್ತೀವಿ ಬನ್ನಿ.

ಕಲಘಟಗಿ ಪಟ್ಟಣದ ಶ್ರೀ ಗ್ರಾಮದೇವಿ ಜಾತ್ರೆ ಆಗಮಿಸುತ್ತಿರುವ ಕಾರಣ ಇಲ್ಲಿಯ ಜನರು ಜಾತ್ರೆಯ ಮುಂಚೆ ಕೆಲವೊಂದು ನಿಯಮಗಳನ್ನು ಆಚರಿಸುತ್ತ ಬರುತ್ತಿದ್ದಾರೆ. ಇಲ್ಲಿಯ ಜನರು ಹೊರವಾರ ಅಂತ ಆಚರಣೆ ಮಾಡುತ್ತ ಬಂದಿದ್ದು. ಈ ಹೊರವಾರ ಯಾವ ರೀತಿ ಆಚರಿಸುತ್ತ ಬರುತ್ತಾರೆ ಎಂಬುದು ಇಲ್ಲಿಯ ಜನರು ಹೇಳುತ್ತಾರೆ ನೋಡಿ ..

ಜಾತ್ರೆಯ ಮುಂಚೆ ಮೂರು ಮಂಗಳವಾರ ಮತ್ತು ಎರಡು ಶುಕ್ರವಾರ ಇಲ್ಲಿಯ ಜನರು ಮುಂಜಾನೆ 10 ರಿಂದ ಸಂಜೆ 5 ಗಂಟೆಯ ವರೆಗೆ ಮನೆಗೆ ಬೀಗ ಹಾಕಿ ವಿವಿಧ ರೀತಿಯ ಅಡುಗೆ ಮಾಡಿಕೊಂಡು ಊರ ಹೊರಗಡೆ ಹೋಗುವುದು ವಿಶೇಷವಾಗಿದೆ.

ಈ ಗ್ರಾಮ ದೇವಿ ಜಾತ್ರೆಗೆ ಎಲ್ಲ ಜಾತಿ ಧರ್ಮದವರು ಈ ಒಂದು ಹೊರವಾರದ ಆಚರಣೆಯನ್ನು ಮಾಡುತ್ತ ಬಂದಿದ್ದು ಮುಸಲ್ಮಾನರು ಮನೆಗೆ ಕೀಲಿ ಹಾಕಿ ಊರ ಹೊರಗಡೆ ಹೋಗುತ್ತಿರುವ ದೃಶ್ಯ ಕಂಡು ಬಂದಿತು.

ಊರ ಹೊರಗಡೆ ಬಂದಿರುವ ಜನರು ಇದನ್ನ ಪಿಕ್ನಿಕ್ ತರಹ ಮೋಜು ಮಸ್ತಿ ಮಾಡುತ್ತ ಹೆಣ್ಣು ಮಕ್ಕಳು ಲಗೋರಿ ಹಾಗೂ ಉತ್ತರ ಕರ್ನಾಟಕದ ಚೀಟಿ ಆಟ ಮತ್ತು ಯುವಕರು ಕ್ರಿಕೆಟ್ ಆಟವನ್ನು ಆಡುತ್ತ ಈ ಹೊರವಾರ ಆಚರಣೆ ಮಾಡುತ್ತಾರೆ.

ಇಂತಹ ಸಂದರ್ಭದಲ್ಲಿ ಊರ ಒಳಗೆ ಯಾರು ಇಲ್ಲದೆ ಊರಿಗೆ ಊರೇ ಬಿಕೋ ಅಂತ ಕಾಣುತ್ತಿರುವ ದೃಶ್ಯ ಕಂಡುಬಂದಿದೆ. ಏನೇ ಆಗಲಿ ಇಂತಹ ಒಂದು ಆಚರಣೆ ಕಲಘಟಗಿ ಪಟ್ಟಣದ ಜನರಿಗೆ ವಿಶೇಷವಾಗಿದ್ದು ಸತ್ಯವಾಗಿದೆ.

ಉದಯ ಗೌಡರ ಪಬ್ಲಿಕ್ ನೆಕ್ಸ್, ಕಲಘಟಗಿ

Edited By : Manjunath H D
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

04/02/2026 08:42 am

Cinque Terre

12.62 K

Cinque Terre

2

ಸಂಬಂಧಿತ ಸುದ್ದಿ