ಹುಬ್ಬಳ್ಳಿ: ಮಾಘ ಹುಣ್ಣಿಮೆ ಅಂಗವಾಗಿ, ಇಂದು ಹಳೇ ಹುಬ್ಬಳ್ಳಿಯ ಜಗದೀಶ ನಗರದಲ್ಲಿರುವ ಶ್ರೀ ಯಲ್ಲಮ್ಮ ದೇವಿಯ ಜಾತ್ರಾ ಮಹೋತ್ಸವ ಹಾಗೂ ಪಲ್ಲಕ್ಕಿ ಉತ್ಸವದ ಅದ್ಧೂರಿಯಾದ ಕಾರ್ಯಕ್ರಮದಲ್ಲಿ ಸರ್ವಧರ್ಮ ಸಮಾಜ ಸೇವಕ ಡಾ. ರಮೇಶ ಮಹಾದೇವಪ್ಪನವರ ಅವರು ಭಾಗಿಯಾಗಿ ಪಲ್ಲಕ್ಕಿ ಹೊತ್ತು ಯಲ್ಲಮ್ಮ ತಾಯಿಗೆ ವಿಶೇಷ ಪೂಜೆ ಸಲ್ಲಿಸಿ, ದೇವಿ ದರ್ಶನ ಪಡೆದರು.
ಯಲ್ಲಮ್ಮ ದೇವಿ ಜಾತ್ರಾ ಮಹೋತ್ಸವದ ಪಲ್ಲಕ್ಕಿ ಉತ್ಸವ ಕಾರ್ಯಕ್ರಮದಲ್ಲಿ ಶ್ರೀ ಮೋಹನ ಗುರುಸ್ವಾಮಿಗಳು, ಮಹಾನಗರ ಪಾಲಿಕೆ ಸದಸ್ಯರಾದ ಚೇತನ್ ಹಿರೇಕೆರೂರ್, ರಜತ್ ಉಳ್ಳಾಗಡ್ಡಿ ಮಠ, ಸಂಜು ಜಂಗ್ಲಿ, ಹರೀಶ್ ಜಂಗ್ಲಿ, ಕಿಶನ್ ಬಿಲಾನ, ಮಂಜುನಾಥ ಮುದ್ದಿ, ಅಶೋಕ ಕಟ್ಟಿಮನಿ, ನಾಗಪ್ಪ ಬಿಲಾನ, ರಾಮಚಂದ್ರ ದೊಡ್ಡಮನಿ, ದುರ್ಗಪ್ಪ ವಜ್ಜಣ್ಣವರ್ ಸೇರಿದಂತೆ ಶಿಕ್ಕಲಗಾರ್ ಸಮಾಜ ಸೇವಾ ಸಂಘದ ಸದಸ್ಯರು ಗುರುಹಿರಿಯರು, ಮಹಿಳೆಯರು ಉಪಸ್ಥಿತರಿದ್ದರು.
Kshetra Samachara
01/02/2026 05:59 pm
LOADING...