ಕಲಘಟಗಿ: ಉತ್ತರ ಕರ್ನಾಟಕದಲ್ಲಿ ಹೆಸರುವಾಸಿಯಾಗಿರುವ ಮೂರು ವರ್ಷಕ್ಕೊಮ್ಮೆ ನಡೆಯುವ ಕಲಘಟಗಿಯ ಶ್ರೀ ಗ್ರಾಮದೇವಿಯ ಜಾತ್ರೆಯು ಸುಪ್ರಸಿದ್ಧಿಯನ್ನು ಪಡೆದಿದೆ.
ಜಾತ್ರೆಯ ನಿಮಿತ್ತ ಫೆಬ್ರವರಿ 3 ನೇ ತಾರೀಖಿನಿಂದ ಕಲಘಟಗಿ ಪಟ್ಟಣದಲ್ಲಿ ಹೋರವಾರ ಪ್ರಾರಂಭವಾಗಲಿದ್ದು ಶುಕ್ರವಾರ ಹಾಗೂ ಮಂಗಳವಾರ ಐದು ವಾರಗಳು ಮುಂಜಾನೆ 10 ರಿಂದ ಸಂಜೆ 5 ರವರೆಗೆ ಕಲಘಟಗಿ ಪಟ್ಟಣದ ಜನರು ತಮ್ಮ ತಮ್ಮ ಮನೆಗಳಿಗೆ ಬೀಗ ಹಾಕಿ ಊರ ಹೊರಗಡೆ ತೆರಳುವ ನಿಯಮವನ್ನು ಆಚರಿಸೋದು ವಿಶೇಷವಾಗಿದೆ.
ಐದು ವಾರಗಳು ಮುಗಿದ ನಂತರ ಫೆಬ್ರವರಿ 25 ರಿಂದ 9 ದಿನಗಳ ಕಾಲ ಕಲಘಟಗಿ ಪಟ್ಟಣದ ಚೌತಮನೆಕಟ್ಟೆಯಲ್ಲಿ ದ್ಯಾಮವ್ವ ಹಾಗೂ ದುರ್ಗಮ್ಮ ದೇವಿಯರನ್ನು ಕೂಡಿಸಿ ವಿಜೃಂಭಣೆಯಿಂದ ಜಾತ್ರೆ ಮಾಡಲಾಗುತ್ತದೆ.
ಮೂರು ವರ್ಷಕ್ಕೊಮ್ಮೆ ನಡೆಯುವ ಈ ದೇವಿ ಜಾತ್ರೆಗೆ ಕಲಘಟಗಿ ಪಟ್ಟಣ ಸಜ್ಜಾಗುತ್ತಿದ್ದು ರಾಜ್ಯದ ಮೂಲೆ ಮೂಲೆಗಳಿಂದ ಜನರು ಇಲ್ಲಿಗೆ ಬಂದು ದೇವಿ ದರ್ಶನ ಪಡೆಯುತ್ತಾರೆ. ತಾವು ಕೂಡ ದೇವಿ ಜಾತ್ರೆಗೆ ಆಗಮಿಸಿ ದೇವಿಯ ದರ್ಶನ ಪಡೆಯಬೇಕೆಂದು ದೇವಸ್ಥಾನದ ಕಮಿಟಿಯವರು ತಿಳಿಸಿದ್ದಾರೆ.
ಉದಯ ಗೌಡರ, ಪಬ್ಲಿಕ್ ನೆಕ್ಸ್ಟ್ ಕಲಘಟಗಿ
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
02/02/2026 06:28 pm
LOADING...