ಕುಂದಗೋಳ : ಲೋಕ ಕಲ್ಯಾಣಕ್ಕಾಗಿ ಉಳವಿ ಚನ್ನಬಸವೇಶ್ವರರ ಸನ್ನಿಧಿಗೆ ಇಲ್ಲೋಬ್ಬ ಕಾವಿಧಾರಿ ಪಾದಯಾತ್ರೆ ಕೈಗೊಂಡು ಭಕ್ತ ಜನರ ಬೇಡಿಕೆಗಳನ್ನು ಹೊತ್ತು ಸಾಗಿದ್ದಾರೆ.
ಕುಂದಗೋಳ ಪಟ್ಟಣದ ಅಭಿನವ ಕಲ್ಯಾಣಪುರ ಬಸವಣಜ್ಜನವರು ಪ್ರತಿ ವರ್ಷದಂತೆ ಈ ವರ್ಷವೂ ಉಳವಿ ಚನ್ನಬಸವೇಶ್ವರ ಜಾತ್ರಾ ಮಹೋತ್ಸವಕ್ಕೆ ಲೋಕ ಕಲ್ಯಾಣಕ್ಕಾಗಿ ರೈತಾಪಿ ಜನರ ಅಭಿವೃದ್ಧಿಗಾಗಿ, ಯೋಧರ ಒಳಿತಿಗಾಗಿ ಪಾದಯಾತ್ರೆ ಕೈಗೊಂಡಿದ್ದಾರೆ.
ಶ್ರೀಗಳ ಪಾದಯಾತ್ರೆಗೆ ಭಕ್ತರು ಸಹ ಸೇವೆ ಸಲ್ಲಿಸಿದ್ದು, ಅಭಿನವ ಬಸವಣ್ಣನವರು ತಮ್ಮ ಪಾದಯಾತ್ರೆಯುದ್ದಕ್ಕೂ ಹಳ್ಳಿ ಹಳ್ಳಿಯ ಭಕ್ತರು ಅನ್ನಸಂತರ್ಪಣೆ ಮೂಲಕ ತಮ್ಮ ಸೇವೆ ನೀಡುತ್ತಲಿದ್ದಾರೆ.
ನಾಳೆ ಬುಧವಾರ ಫೆ.3 ಉಳವಿ ಚನ್ನಬಸವೇಶ್ವರ ಮಹಾರಥೋತ್ಸವದಲ್ಲಿ ಅಭಿನವ ಕಲ್ಯಾಣಪುರ ಬಸವಣಜ್ಜನವರು ಭಾಗಿಯಾಗುವರು.
ಶ್ರೀಧರ ಪೂಜಾರ, ಪಬ್ಲಿಕ್ ನೆಕ್ಸ್ಟ್
Kshetra Samachara
02/02/2026 12:24 pm
LOADING...