ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸ್ಮಾರ್ಟ್ ಸಿಟಿಯ ವೈಫಲ್ಯವನ್ನು ಒಪ್ಪಿಕೊಂಡ ಅಧಿಕಾರಿಗಳು: ಆತ್ಮಸಾಕ್ಷಿ ಪ್ರಶ್ನೆಗೆ ಮೌನಕ್ಕೆ ಶರಣು..!

ಹುಬ್ಬಳ್ಳಿ: ಸಾವಿರಾರು ಕೋಟಿಯಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಿ, ಅಚ್ಚಳಿಯದೆ ಉಳಿಯುವ ಕೊಡುಗೆಯನ್ನು ಕೊಡಬೇಕಿದ್ದ ಸ್ಮಾರ್ಟ್ ಸಿಟಿ ಸಂಪೂರ್ಣ ವೈಫಲ್ಯವಾಗಿದೆ. ಪಾಲಿಕೆಯ ಸದಸ್ಯರ ಆತ್ಮಸಾಕ್ಷಿಯ ಪ್ರಶ್ನೆಗೆ ಪಾಲಿಕೆ ಆಯುಕ್ತರೇ ಮೌನಕ್ಕೆ ಶರಣಾಗಿದ್ದು, ಸ್ಮಾರ್ಟ್ ಸಿಟಿಯ ಹಣ ಅನಾವಶ್ಯಕ ವ್ಯರ್ಥವಾಗಿರುವ ಬಗ್ಗೆ‌ ಮತ್ತೊಮ್ಮೆ ಸಾರ್ವಜನಿಕವಾಗಿ ಬಹಿರಂಗಗೊಂಡಿದೆ.

ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಸ್ಮಾರ್ಟ್ ಸಿಟಿಯ ಚರ್ಚೆ ಜೋರಾಗಿಯೇ ನಡೆದಿದೆ. ಸಂಪೂರ್ಣ ವೈಫಲ್ಯವಾಗಿದೆ ಎಂಬುವಂತದ್ದು, ಎಲ್ಲರಿಗೂ ಗೊತ್ತಿರುವ ವಿಷಯವಾಗಿದೆ. ಆದರೆ ಪಾಲಿಕೆಯ ಸಭೆಯಲ್ಲಿ ಬಿಜೆಪಿ ಸದಸ್ಯರಾದ ತಿಪ್ಪಣ್ಣ ಮಜ್ಜಗಿ, ಈರೇಶ ಅಂಚಟಗೇರಿಯವರು ಸ್ಮಾರ್ಟ್ ಸಿಟಿ ಎಂಡಿಯೂ ಆಗಿರುವ ಪಾಲಿಕೆಯ ಆಯುಕ್ತರಿಗೆ ಆತ್ಮಸಾಕ್ಷಿಯ ಪ್ರಶ್ನೆ ಕೇಳುತ್ತಿದ್ದಂತೆಯೇ ಆಯುಕ್ತರು ಸೈಲೆಂಟ್ ಆಗಿರುವುದು ನಿಜಕ್ಕೂ ಸ್ಮಾರ್ಟ್ ಸಿಟಿಯ ಸಂಪೂರ್ಣ ವೈಫಲ್ಯವನ್ನು ಎತ್ತಿ ತೋರಿಸುತ್ತಿದೆ.

ಸ್ಪೋರ್ಟ್ಸ್ ಪಾರ್ಕ್ ಕಾಮಗಾರಿ ಪ್ರಗತಿಯಲ್ಲಿರುವ ಒಂದನ್ನು ಬಿಟ್ಟರೇ ಸಂಪೂರ್ಣ ಎಲ್ಲ ಯೋಜನೆಗಳು ಹಳ್ಳ ಹಿಡಿದಿದ್ದು, ಉದ್ಘಾಟನೆ ನಂತರ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ಬಣ್ಣವೂ ಬಯಲಾಗಿಲಿದೆ. ಹು-ಧಾ ಸ್ಮಾರ್ಟ್ ಸಿಟಿ ಯೋಜನೆಯಡಿ ಅವಳಿ ನಗರದಲ್ಲಿ ಕೈಗೊಂಡ 990 ಕೋಟಿ ರೂ. ವೆಚ್ಚದ ಕಾಮಗಾರಿಗಳಿಗೆ ಅಷ್ಟೊಂದು ಪ್ರಮಾಣದಲ್ಲಿ ಹಣ ಖರ್ಚಾದರೂ, ಹೇಳಿಕೊಳ್ಳುವಂತಹ ಅಭಿವೃದ್ಧಿ ಆಗಿಲ್ಲ ಎಂದು ಆಯುಕ್ತರ ವಿರುದ್ಧ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದಾಗ ಆಯುಕ್ತರು ಮೌನಕ್ಕೆ ಶರಣಾಗಿರುವುದು ಮೌನಂ ಸಮ್ಮತಿ ಲಕ್ಷಣಂ ಎಂಬುವಂತಾಗಿದೆ.

ಮಲ್ಲೇಶ್ ಸೂರಣಗಿ ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ

Edited By : Vinayak Patil
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

02/02/2026 05:47 pm

Cinque Terre

40.42 K

Cinque Terre

5

ಸಂಬಂಧಿತ ಸುದ್ದಿ