ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಫಿನ್ನೋವೆಟ್ ಶೃಂಗಸಭೆಗೆ ಅದ್ದೂರಿ ಚಾಲನೆ - 147 ಸ್ಟಾರ್ಟಪ್ ಗಳ ಸಮಾಗಮ..!

ಹುಬ್ಬಳ್ಳಿ: ಎತ್ತಣ ಮಾಮರ..! ಎತ್ತಣ ಕೋಗಿಲೆ..? ಎತ್ತಣದಿಂದೆತ್ತ ಸಂಬಂಧವಯ್ಯ ಎಂಬುವಂತ ದೇಶದ ಮೂಲೆ, ಮೂಲೆಗಳಿಂದ ಆಗಮಿಸಿದ ಸ್ಟಾರ್ಟಪ್ ಗಳಿಗೆ ಹಾಗೂ ಕನಸುಗಳಿಗೆ ಪೂರಕ ವೇದಿಕೆ ಕಲ್ಪಿಸುವಂತ ನಿಟ್ಟಿನಲ್ಲಿ ಆಯೋಜಿಸಲಾಗಿದ್ದ ಫಿನ್ನೋವೆಟ್ ಶೃಂಗಸಭೆ-2026ಗೆ ಅದ್ದೂರಿ ಚಾಲನೆ ದೊರೆತಿದೆ.

ಐಬಿಎಂಆರ್ ಶಿಕ್ಷಣ ಸಂಸ್ಥೆಯ ನೇತೃತ್ವದಲ್ಲಿ ನಡೆದ ವಿಕಸಿತ ಭಾರತದ ಕನಸನ್ನು ಸಾಕಾರಗೊಳಿಸುವ ಹಾಗೂ ಆಧುನಿಕ ತಂತ್ರಜ್ಞಾನದ ಜೊತೆಗೆ ಸುಸ್ಥಿರ ಅಭಿವೃದ್ಧಿಗೆ ನಾಂದಿ ಹಾಡಲಿರುವ ಫಿನ್ನೋವೆಟ್ ಶೃಂಗಸಭೆಗೆ ಐಬಿಎಂಆರ್ ಶಿಕ್ಷಣ ಸಂಸ್ಥಾಪಕರಾದ ವಿನಯಚಂದ್ರ ಮಹೇಂದ್ರಕರ, ಸುಮಾ ಮಹೇಂದ್ರಕರ, ಗಿರೀಶ್ ಮಾನೆ, ಡಾ‌.ಎಚ್.ವಿ. ಬೆಳಗಲಿ, ಅಮನ್ ಲಂಬಾ, ವೆಂಕಟೇಶ ದೇಶಪಾಂಡೆ, ಡಾ.ಇಗ್ನೇಶ್ ಸಾಕ್ರಿ ದೀಪ ಬೆಳಗುವ ಮೂಲಕ ಚಾಲನೆ ನೀಡಿದರು.

ಇನ್ನೂ 147 ಸ್ಟಾರ್ಟಪ್‌ಗಳು ಫಿನ್ನೋವೆಟ್ ಶೃಂಗಸಭೆಯಲ್ಲಿ ಭಾಗವಹಿಸಿದ್ದು, ವಿನಯಚಂದ್ರ ಮಹೇಂದ್ರಕರ ಹಾಗೂ ಸುಮಾ ವಿನಯಚಂದ್ರ ಮಹೇಂದ್ರಕರ ನೇತೃತ್ವದಲ್ಲಿ ನಡೆದ ಬಹುದೊಡ್ಡ ಸಂಭ್ರಮ ಅದ್ದೂರಿಯಾಗಿ ಆರಂಭಗೊಂಡು, ನವೋದ್ಯಮಗಳ ಅಭಿವೃದ್ಧಿ ಜೊತೆಗೆ ಆಧುನಿಕ ತಂತ್ರಜ್ಞಾನದ ಸದ್ಬಳಿಕೆಯ ಬಗ್ಗೆ ಮಹತ್ವದ ಸಂದೇಶವನ್ನು ನೀಡಿರುವುದು ವಿಶೇಷವಾಗಿದೆ.

Edited By : Manjunath H D
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

28/02/2026 01:58 pm

Cinque Terre

200.3 K

Cinque Terre

0

ಸಂಬಂಧಿತ ಸುದ್ದಿ