ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: ವೃದ್ಧಾಶ್ರಮದಲ್ಲಿ ಇದ್ರು ಫಿಟ್ ಆ್ಯಂಡ್ ಫೈನ್, 79 ನೇ ವಯಸ್ಸಿನಲ್ಲಿ ರಾಷ್ಟ್ರಮಟ್ಟದ ಪ್ರಶಸ್ತಿ ಪಡೆದ ಅಜ್ಜಿ

ಬೆಳಗಾವಿ: ವೃದ್ಧಾಶ್ರಮದಲ್ಲಿ ಇರುವ ಈ ಅಜ್ಜಿಗೆ 79 ವಯಸ್ಸು, ಡ್ಯಾನ್ಸ್ ಮಾಡೋಕು ಸೈ, ಆಟಕ್ಕೂ ಸೈ. ಫಿಟ್ ಆ್ಯಂಡ್ ಫೈನ್ ಆಗಿರುವ ಅಜ್ಜಿ ಬೆಳಗಾವಿಗೆ ಕೀರ್ತಿ ತಂದಿದ್ದಾರೆ.

ಹೌದು.. ಬೆಳಗಾವಿ ನಗರದ ಶಾಂತೈ ವೃದ್ಧಾಶ್ರಮದಲ್ಲಿ ಇರುವ ಅಜ್ಜಿಯ ಹೆಸರು ಶ್ಯಾಮ್ ಸುಮನ್ ಅಂತ. ಇವರ ಫಿಟ್ನೆಸ್ ಗೆ ರಾಷ್ಟ್ರಮಟ್ಟದ ಪ್ರಶಸ್ತಿ ದೊರೆತಿದೆ.‌ ಕೇಂದ್ರ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ ನೇತೃತ್ವದಲ್ಲಿ ಫಿಟ್ ಇಂಡಿಯಾ ಮಿಷನ್ ನಡಿ ವಿಶಾಖಪಟ್ಟಣಂನಲ್ಲಿ ಆಯೋಜಿಸಿದ ಪ್ರತಿಷ್ಠಿತ ಫಿಟ್ ಇಂಡಿಯಾ ಆಂದೋಲನ ಕಾರ್ಯಕ್ರಮದಲ್ಲಿ ಭಾಗವಹಿಸಿ ರಾಜ್ಯಕ್ಕೆ ಹೆಮ್ಮೆ ತಂದಿದ್ದಾರೆ.

ಈ ರಾಷ್ಟ್ರಮಟ್ಟದ ಕಾರ್ಯಕ್ರಮದಲ್ಲಿ ಶಾಂತೈ ವೃದ್ಧಾಶ್ರಮವನ್ನು ಪ್ರತಿನಿಧಿಸಿದವರು ಶ್ಯಾಮ್ ಸುಮನ್ ಅಜ್ಜಿ ಅವರ ಜೊತೆಗೆ ಅಲನ್ ಮೋರ್ ಮತ್ತು ಚೆರಿಲ್ ಮೋರ್ ಅವರ ತಂಡವು ಭಾಗವಹಿಸಿತು. ಈ ವೇಳೆ ಶ್ಯಾಮ್ ಸುಮನ್ ಅಜ್ಜಿಗೆ ನಾಗರಿಕರಲ್ಲಿ ಫಿಟ್ನೆಸ್ ಮತ್ತು ಜಾಗೃತಿಯನ್ನು ಉತ್ತೇಜಿಸಲು ಫಿಟ್ ಇಂಡಿಯಾ ಚಟುವಟಿಕೆಗಳ ಭಾಗವಾಗಿ ಆಯೋಜಿಸಲಾದ ಸೈಕ್ಲಿಂಗ್ ರ್ಯಾಲಿಗೆ ಹಸಿರು ನಿಶಾನೆ ತೋರಿಸುವ ಅವಕಾಶ ಕಲ್ಪಿಸಲಾಗಿತ್ತು. ಜೊತೆಗೆ ಇವರು ವೇದಿಕೆ ಮೇಲೆ ಕುಣಿದು ಯುವ ಸಮೂಹವನ್ನು ಉತ್ತೇಜಿಸಿದರು. ಇದರ ಮೂಲಕ ಎಲ್ಲಾ ವಯಸ್ಸಿನಲ್ಲೂ ಸಕ್ರಿಯ ಜೀವನದ ಮಹತ್ವವನ್ನು ಅವರು ತೋರಿಸಿದ್ದಾರೆ.

ರಾಷ್ಟ್ರ ಮಟ್ಟದ ವೇದಿಕೆಯಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದ ಬೆಳಗಾವಿ ಮತ್ತು ಕರ್ನಾಟಕಕ್ಕೂ ಅಪಾರ ಹೆಮ್ಮೆಯನ್ನು ತಂದು ಕೊಟ್ಟಿದ್ದಾರೆ.‌ ಕೇಂದ್ರ ಕೀಡಾ ಸಚಿವಾಲಯ ಮತ್ತು ಫಿಟ್ ಇಂಡಿಯಾ ಕಾರ್ಯಕ್ರಮದ ಆಯೋಜಕರು ಶ್ಯಾಮ್ ಸುಮನ್ ಅಜ್ಜಿಯ ಕಾರ್ಯ ಗುರುತಿಸಿ ರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಕೆಲಸವನ್ನು ಪ್ರತಿನಿಧಿಸಲು ಅವಕಾಶವನ್ನು ಒದಗಿಸಿದ್ದಕ್ಕಾಗಿ ಶಾಂತೈ ವೃದ್ಧಾಶ್ರಮದ ಕಾರ್ಯಾಧ್ಯಕ್ಷ ವಿಜಯ ಮೋರೆ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.

ಒಟ್ಟಿನಲ್ಲಿ ಅಜ್ಜಿಗೆ 79 ವಯಸ್ಸಾದರು ಯುವ ಸಮೂಹಕ್ಕೆ ಮಾದರಿಯಾಗಿದ್ದಾಳೆ.

ಪ್ರಲ್ಹಾದ್ ಪೂಜಾರಿ ಪಬ್ಲಿಕ್ ನೆಕ್ಸ್ಟ್, ಬೆಳಗಾವಿ

Edited By :
PublicNext

PublicNext

06/03/2026 04:39 pm

Cinque Terre

10.88 K

Cinque Terre

1

ಸಂಬಂಧಿತ ಸುದ್ದಿ