ಬೆಳಗಾವಿ: ಬೆಳಗಾವಿ ನಗರದ `ಸುರಣ್ಣವರ ಆಸ್ಪತ್ರೆ' ಆಧುನಿಕ ಅಸ್ಥಿ ಚಿಕಿತ್ಸಾ ಕ್ಷೇತ್ರದಲ್ಲಿ ಮಹತ್ವದ ಸಾಧನೆ ಮಾಡಿದೆ. ಬೆಳಗಾವಿಯಲ್ಲಿ ಮೊದಲ ಬಾರಿಗೆ ರೋಬೋಟಿಕ್ ಜಾಯಿಂಟ್ ರಿಪ್ಲೇಸ್ಮೆಂಟ್ ಶಸ್ತ್ರಚಿಕಿತ್ಸೆಯನ್ನು ಪ್ರಾರಂಭಿಸಲಾಗಿದೆ ಎಂದು ಡಾ. ಜಗದೀಶ ಸುರಣ್ಣವರ ತಿಳಿಸಿದರು.
ಬೆಳಗಾವಿ ನಗರದಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, `ಅತ್ಯಾಧುನಿಕ ತಂತ್ರಜ್ಞಾನದಿಂದ ಶಸ್ತ್ರಚಿಕಿತ್ಸಕರು ಹೆಚ್ಚು ನಿಖರತೆಯಿಂದ ಜಾಯಿಂಟ್ ಬದಲಾವಣೆ ಶಸ್ತ್ರಚಿಕಿತ್ಸೆ ನಡೆಸಲು ಸಾಧ್ಯವಾಗುತ್ತದೆ. ಈ ಮೂಲಕ ಇಂಪ್ಲಾಂಟ್‌ಗಳನ್ನು ಸರಿಯಾದ ಸ್ಥಾನದಲ್ಲಿ ಅಳವಡಿಸುವುದು ಸುಲಭವಾಗಿದ್ದು, ರೋಗಿಗಳು ಶೀಘ್ರವಾಗಿ ಚೇತರಿಸಿಕೊಳ್ಳಲು ಸಹಾಯಕವಾಗುತ್ತದೆ.
ಸುರಣ್ಣವರ ಆಸ್ಪತ್ರೆ ಉತ್ತರ ಕರ್ನಾಟಕದ ರೋಗಿಗಳಿಗೆ ರೋಬೋಟಿಕ್ ಸಹಾಯದ ಅಸ್ಥಿ ಶಸ್ತ್ರಚಿಕಿತ್ಸೆಯನ್ನು ಪರಿಚಯಿಸಿದ ಮುಂಚೂಣಿ ಆಸ್ಪತ್ರೆಗಳಲ್ಲೊಂದು. ಇದರ ಪರಿಣಾಮವಾಗಿ ರೋಗಿಗಳು ಅತ್ಯಾಧುನಿಕ ಸಂಧಿ ಬದಲಾವಣೆ ಚಿಕಿತ್ಸೆಗೆ ಮೆಟ್ರೋ ನಗರಗಳಿಗೆ ಪ್ರಯಾಣಿಸುವ ಅಗತ್ಯ ಕಡಿಮೆಯಾಗುತ್ತದೆ," ಎಂದರು.`ಸುರಣ್ಣವರ ಆಸ್ಪತ್ರೆ ಉತ್ತರ ಕರ್ನಾಟಕದ ಬೆಳಗಾವಿ ಜಿಲ್ಲೆಯಲ್ಲಿ ಮೊದಲ ಬಾರಿಗೆ ಅಂತಾರಾಷ್ಟ್ರೀಯ ತರಬೇತಿ ಫೆಲೋಶಿಪ್ ಆರಂಭಿಸಿದೆ. ಈ ಕಾರ್ಯಕ್ರಮದಡಿ ನಾನಾ ದೇಶಗಳ ಅಸ್ಥಿ ತಜ್ಞರು ಇಲ್ಲಿ ಭೇಟಿ ನೀಡಿ ಸಂಧಿ ಬದಲಾವಣೆ ಮತ್ತು ಟ್ರಾಮಾ ಶಸ್ತ್ರಚಿಕಿತ್ಸೆಗಳ ಉನ್ನತ ತಂತ್ರಗಳನ್ನು ಕಲಿಯುತ್ತಿದ್ದಾರೆ.
ಮೊದಲ ಫೆಲೋ ಆಗಿ ಯೂರೋಪಿನ ರೊಮೇನಿಯಾ ದೇಶದ ಡಾ. ಡ್ರಾಗೋಸ್ ಮಿರೋಸು, ಮುಂಬೈನ ಡಾ. ಸಯ್ಯದ್ ಜಫರ್ ಹಾಗೂ ಕಲಬುರಗಿಯ ಡಾ. ಸುಮಿತ ಪಾಟೀಲ ಅವರು ಫೆಲೋಶಿಪ್ ಪ್ರಾರಂಭಿಸಿದ್ದಾರೆ. ಸಾಮಾನ್ಯವಾಗಿ ಭಾರತೀಯ ವೈದ್ಯರು ಯುರೋಪಿಗೆ ತೆರಳಿ ಅಸ್ಥಿ ಚಿಕಿತ್ಸೆ ಕಲಿಯುತ್ತಾರೆ. ಆದರೆ ಯುರೋಪಿನ ಶಸ್ತ್ರಚಿಕಿತ್ಸಕರು ಭಾರತಕ್ಕೆ, ವಿಶೇಷವಾಗಿ ಬೆಳಗಾವಿಯ ಸುರಣ್ಣವರ ಆಸ್ಪತ್ರೆಗೆ ಬಂದು ಅತ್ಯಾಧುನಿಕ ಚಿಕಿತ್ಸೆ ತಂತ್ರಗಳನ್ನು ಕಲಿಯುತ್ತಿರುವುದು ಹೆಮ್ಮೆಯ ಸಂಗತಿ," ಎಂದರು.ಡಾ. ಡ್ರಾಗೋಸ್ ಮಿರೋಸು, ಡಾ. ಸುನೀಲ ಪಾಟೀಲ, ಡಾ. ಜಾಫರ್ ಇತರರು ಇದ್ದರು.
PublicNext
16/03/2026 10:41 pm
LOADING...