ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಿದ್ದಾಪುರ : ಅರಣ್ಯವಾಸಿಗಳ ಅರ್ಜಿ ಮರುಪರಿಶೀಲನೆ: ರಾಜಕೀಯ ಸಹಕಾರಕ್ಕೆ ನಾಗೇಶ ನಾಯ್ಕ್ ಕಾಗಲ್ ಕರೆ

ಸಿದ್ದಾಪುರ : ಜಿಲ್ಲೆಯ ಅರಣ್ಯವಾಸಿ ಭೂ ಸಾಗುವಳಿದಾರರ ತಿರಸ್ಕೃತ ಅರ್ಜಿಗಳ ಮರುಪರಿಶೀಲನೆಗಾಗಿ ಜಿಲ್ಲಾಧಿಕಾರಿಗಳು ಹೆಚ್ಚಿನ ಕಾಲಾವಕಾಶ ನೀಡಿದ್ದು ಆ ಅವಧಿಯ ಒಳಗೆ ನಾವು ಲೋಪದೋಷಗಳನ್ನ ಸರಿಪಡಿಸಿಕೊಳ್ಳಬೇಕಾಗಿದೆ ಅಧಿಕಾರಿಗಳು ಅವರ ಕೆಲಸ ಮಾಡುತ್ತಾರೆ,

ಈ ಕೆಲಸಕ್ಕೆ ಪ್ರಮುಖವಾಗಿ ರಾಜಕೀಯ ಒತ್ತಡ ಬೇಕಾಗಿದೆ ವಿಶೇಷವಾಗಿ ನಮ್ಮ ಶಾಸಕರು ನಮ್ಮ ಮಂತ್ರಿಗಳು ಈ ಪ್ರಕ್ರಿಯೆಯಲ್ಲಿ ಹೆಚ್ಚು ಗಮನವಿಟ್ಟು ಸಹಕಾರ ನೀಡಿದರೆ ಮರುಪರಿಶೀಲನ ಸಮಿತಿಯಲ್ಲಿ ಕೆಲಸಗಳು ಅತಿ ವೇಗವಾಗಿ ಮಾಡಲು ಸಾಧ್ಯವಾಗುತ್ತದೆ ಎಂದು ಜಿಲ್ಲಾ ಜನಪರ ವೇದಿಕೆ ಅಧ್ಯಕ್ಷ ನಾಗೇಶ ನಾಯ್ಕ್ ಕಾಗಲ್ ಹೇಳಿದರು.

ಅವರು ಸಿದ್ದಾಪುರ ಪಟ್ಟಣದಲ್ಲಿ ಪ್ರಮುಖ ಮುಖಂಡರೊಂದಿಗೆ ಸಮಾಲೋಚನೆ ಸಭೆ ನಡೆಸಿ ಮಾತನಾಡಿದರು.

ನಾವು ನಮ್ಮ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯರವರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಭೇಟಿಯಾಗಿ ಉತ್ತರ ಕನ್ನಡ ಜಿಲ್ಲೆಯ ಅರಣ್ಯ ಅತಿಕ್ರಮಣದಾರರ ಸಮಸ್ಯೆಯ ಬಗ್ಗೆ ಗಮನ ಸೆಳೆದಾಗ ಅಹಿಂದ ಸಂಘಟನೆಯ ಬಗ್ಗೆ ವಿಪರೀತ ಕಾಳಜಿ ಇರುವ ಸಿದ್ದರಾಮಯ್ಯನವರು ಅವಕಾಶ ನೀಡಿದ್ದಾರೆ ಇದರ ಸದುಪಯೋಗ ಪಡೆದುಕೊಳ್ಳಬೇಕಾಗಿದೆ ಎಂದರು.

ಈ ಸಂದರ್ಭದಲ್ಲಿ ಸಮಿತಿಯ ಜಿಲ್ಲಾ ಉಪಾಧ್ಯಕ್ಷ ವಿ. ಎನ್ ನಾಯ್ಕ್, ತಾಲ್ಲೂಕು ಘಟಕ ಅಧ್ಯಕ್ಷ ಚೌಡ ಆರ್ ನಾಯ್ಕ್,ಪ್ರಮುಖರಾದ ಬಿ. ಆರ್ ನಾಯ್ಕ್,ಸುರೇಂದ್ರ ಗೌಡ, ಚಂದ್ರು ಕಾನಡೆ, ರಾಮಕೃಷ್ಣ ನಾಯ್ಕ್,, ಸಿ ಟಿ ನಾಯ್ಕ್ ಲಲಿತಾ ನಾಯ್ಕ್ ಮತ್ತಿತರರು ಉಪಸ್ಥಿತರಿದ್ದರು. ತಾಲ್ಲೂಕು ಕೃಷಿಕ ಸಮಾಜದ ಅಧ್ಯಕ್ಷ ವೀರಭದ್ರ ನಾಯ್ಕ್ ಸ್ವಾಗತಿಸಿ ನಿರೂಪಿಸಿ ವಂದಿಸಿದರು.

Edited By : PublicNext Desk
Kshetra Samachara

Kshetra Samachara

13/03/2026 07:03 pm

Cinque Terre

3.82 K

Cinque Terre

0

ಸಂಬಂಧಿತ ಸುದ್ದಿ