ಸಿದ್ದಾಪುರ: ತಾಲೂಕಿನ ತ್ಯಾರ್ಸಿ ಬಳಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ದೇಶಿಯ ಆಹಾರ ಮೇಳ ಪ್ರದರ್ಶನ ಮತ್ತು ಮಾರಾಟ ಕಾರ್ಯಕ್ರಮ ನಡೆಯಿತು. ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ವಿ ಎನ್ ನಾಯ್ಕ್ ಬೇಡ್ಕಣಿ ಉದ್ಘಾಟಿಸಿದರು. ವಿದ್ಯಾರ್ಥಿಗಳು ವಿವಿಧ ಬಗೆಯ ಮಲೆನಾಡಿನ ಪ್ರಸಿದ್ಧ ತಿಂಡಿ ತಿನಿಸು, ರೊಟ್ಟಿ, ಕಜ್ಜಾಯ ಹೋಳಿಗೆ ಹಾಗೂ ಪಾನೀಯಗಳನ್ನ ಸಿದ್ದಪಡಿಸಿ ಪ್ರದರ್ಶಿಸಿದರು, ಆಹಾರ ತಯಾರಿಕೆಯ ಸಿದ್ಧತೆ, ಗುಣಮಟ್ಟ, ಅರೋಗ್ಯಗುಣಗಳ ಕುರಿತು ವಿವರಿಸಿದರು.
ಮಳಿಗೆಗಳಿಗೆ ಬಂದ ಅತಿಥಿಗಳನ್ನ ಹೂ ಗುಚ್ಚ ನೀಡಿ ಸ್ವಾಗತಿಸಿ ಮಹಿಳೆಯರಿಗೆ ಅರಿಶಿನ, ಕುಂಕುಮ ನೀಡಿ, ತಲೆಗೆ ಎಣ್ಣೆ ಹಾಕಿ ಹೂಗಳನ್ನ ನೀಡಿ ಪ್ರೀತಿಯಿಂದ ಬರಮಾಡಿಕೊಂಡರು.
ಗಣ್ಯರು ಮುದ್ದು ವಿದ್ಯಾರ್ಥಿಗಳು ಆಸಕ್ತಿಯಿಂದ ಶ್ರಮವಹಿಸಿ ತಯಾರಿಸಿದ ಆಹಾರಗಳ ಸವಿದು ವಿದ್ಯಾರ್ಥಿಗಳ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು.
ಇದೊಂದು ವಿನೂತನ ಪ್ರಯತ್ನ ಅಚ್ಚುಕಟ್ಟಾಗಿ ಮೂಡಿ ಬಂದಿದೆ ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದಲ್ಲಿ ತಾಲೂಕಿನ ಸಾರ್ವಜನಿಕರೆಲ್ಲರೂ ಭಾಗವಹಿಸುವಂತೆ ಕಾರ್ಯಕ್ರಮ ಏರ್ಪಡಿಸೋಣ ಎಂದು ಅತಿಥಿಗಳು ಹುರಿದುಂಬಿಸಿದರು.
ಕಾಲೇಜು ಪ್ರಚಾರ್ಯ ಡಾ ಸತೀಶ ನಾಯ್ಕ್ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಎಂ ಟಿ ಗೌಡ, ಎಸ್ ಕೆ ನಾಯ್ಕ್, ಇಂದಿರಾ ನಾಯ್ಕ್,ದಿವಾಕರ ನಾಯ್ಕ್ ಸಂಪಖಂಡ ಮತ್ತಿತರರ ಗಣ್ಯರು ಉಪಸ್ಥಿತರಿದ್ದರು.
ಸಹಪ್ರಧ್ಯಾಪಕ ನಾರಾಯಣ ಗೌಡ ಸ್ವಾಗತಿಸಿದರು. ಉಪನ್ಯಾಸಕ ಮಾರುತಿ ಗಾವಡಿ , ಮಹಾಲಕ್ಷ್ಮಿ ನಾಯ್ಕ್ ವಂದಿಸಿದರು. ಗಣಪತಿ ಎಂ ಬಿ ಪ್ರಾಸ್ತಾವಿಕ ಮಾತನಾಡಿದರು. ದೇಶಿಯ ಆಹಾರ ಮೇಳದಲ್ಲಿ ದೋಸ್ತಿ ಉಪಹಾರ ಗೃಹ, ದೇಸಿ ಸವಿರುಚಿ, ಹಳ್ಳಿಮನೆ, ಅಜ್ಜನ ಮನೆ ಹೋಟೆಲ್, ಮಲೆನಾಡು ರುಚಿ, ಶುದ್ಧ ತಿನಿಸು, ಮಲೆನಾಡು ರುಚಿ ಕಟ್ಟೆ, ಶಿರಾಪುರ ಸ್ವಾದ ಸಂಗಮ, ಹಳ್ಳಿ ಮನೆ ಊಟ, ಅಮ್ಮನ ಕೈ ತುತ್ತು, ರಾಯಲ್ ಮಲೆನಾಡು ಡಿಲೈಟ್ಸ್ ಮಳಿಗೆಗಳನ್ನ ವಿದ್ಯಾರ್ಥಿಗಳು ತೆರೆದು ನಮ್ಮ ಪರಂಪರೆಯ ಸವಿ ಬಡಿಸಿದರು.
Kshetra Samachara
17/03/2026 07:24 pm