ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿರಶಿ : ಅಪಾಯಕಾರಿ ರಸ್ತೆ: ಪ್ರತಿ ದಿನವೂ ಸಾವಿನೊಂದಿಗೆ ಹೋರಾಟ, ತಕ್ಷಣ ಕ್ರಮಕ್ಕೆ ಆಗ್ರಹ!

ಶಿರಶಿ : ಇಕ್ಕಟ್ಟಾದ ರಸ್ತೆಯಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ವಾಹನ ಸಂಚಾರದಿಂದ ಅಪಘಾತಗಳ ಭೀತಿ ಹೆಚ್ಚಾಗಿದೆ. ಈ ಮಾರ್ಗದಲ್ಲಿ ಯಾವುದೇ ಮುಂಜಾಗ್ರತಾ ಸೂಚನಾ ಫಲಕಗಳಿಲ್ಲದೆ ವಾಹನ ಸವಾರರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಆಗಾಗ ಸಂಭವಿಸುವ ಅಪಘಾತಗಳಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ಸಾಗಿಸುವ ಜವಾಬ್ದಾರಿ ಗ್ರಾಮಸ್ಥರ ಮೇಲೆಯೇ ಬಿದ್ದಿದೆ. ರಸ್ತೆ ಕಾಮಗಾರಿಯಿಂದಾಗಿ ಮಾರ್ಗವು ಸಂಪೂರ್ಣ ಧೂಳುಮಯವಾಗಿದ್ದು, ಈ ಹಾದಿಯಲ್ಲಿ ಪ್ರಯಾಣಿಸುವುದು ಸವಾರರಿಗೆ ದುಸ್ಸಾಹಸವಾಗಿದೆ.

ಅಪಘಾತಗಳ ಸಂಖ್ಯೆ ಹೆಚ್ಚಾಗುವ ಮುನ್ನವೇ, ತಕ್ಷಣವೇ ರಸ್ತೆಗೆ ಸೂಚನಾ ಫಲಕಗಳನ್ನು ಅಳವಡಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಸಂಬಂಧಪಟ್ಟ ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ.

Edited By : PublicNext Desk
Kshetra Samachara

Kshetra Samachara

14/03/2026 02:17 pm

Cinque Terre

4.24 K

Cinque Terre

0

ಸಂಬಂಧಿತ ಸುದ್ದಿ