ಶಿರಸಿ: ಮಾರ್ಚ 21ರಂದು ನಗರದ ಇದ್ಗಾ ಮೈದಾನದಲ್ಲಿ ಸಾವಿರಾರು ಮುಸ್ಲಿಂ ಬಾಂಧವರಿಂದ ಪವಿತ್ರವಾದ ರಂಜಾನ್ ಹಬ್ಬವನ್ನು ಶನಿವಾರ ಅತ್ಯಂತ ಸಂಭ್ರಮ ಸಡಗರದಿಂದ ನಮಾಜ್ ಮಾಡುವ ಮೂಲಕ ಹಬ್ಬವನ್ನು ಆಚರಣೆ ಮಾಡಿದರು.
ನಂತರ ಮುಸ್ಲಿಂ ಸಮಾಜದ ಬಾಂಧವರು ಒಂದಡೆ ಸೇರಿ ಶಿವಾಜಿ ಚೌಕ್ ನಿಂದ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡುವ ಮೂಲಕ ರಂಜಾನ್ ಹಬ್ಬವನ್ನು ಶಾಂತಿ ಸೌಹಾರ್ದತೆಯಿಂದ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮಧರಸಾ ಅಧ್ಯಕ್ಷ ಸತ್ತಾರ್ ಕೂಬಗಡ್ಡಿ, ಮಸೀದಿ ಅದ್ಯಕ್ಷ ಬಾಕಿಸೌಧಾಗರ್ , ಮಾರ್ಕಸ್ ಜಮಾತ್ ಅಬುಜರ್ ಶೇಖ್, ಸೈಯದ್ ಸೇರಿದಂತೆ
ಮುಸ್ಲಿಂ ಸಮಾಜದ. ಮುಖಂಡರು, ಯುವಕರು ಪಾಲ್ಗೊಂಡಿದ್ದರು.
Kshetra Samachara
21/03/2026 08:56 pm
LOADING...