ಚಾಮರಾಜನಗರ: ಚಾಮರಾಜನಗರ ಜಿಲ್ಲೆಯಲ್ಲಿ ಗೃಹಬಳಕೆ ಸಿಲಿಂಡರ್ ಪೂರೈಕೆಯಲ್ಲಿ ಯಾವುದೇ ವ್ಯತ್ಯಯ ಆಗಿಲ್ಲ ಆದರೆ ವಾಣಿಜ್ಯ ಬಳಕೆ ಸಿಲಿಂಡರ್ ಪೂರೈಕೆಯಲ್ಲಿ ಸಮಸ್ಯೆಯಾಗಿದ್ದು ಶೀಘ್ರವೇ ಬಗೆಹರಿಯಲಿದೆ ಎಂದು ಜಿಲ್ಲಾಧಿಕಾರಿ ಶ್ರೀರೂಪ ಹೇಳಿದರು.
ಚಾಮರಾಜನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ವರ್ ಡೌನ್ ನಿಂದ ಬುಕ್ಕಿಂಗ್ ಸಮಸ್ಯೆಯಾಗಿದೆ, ಗೃಹ ಬಳಕೆ ಸಿಲಿಂಡರ್ ಪೂರೈಕೆಯಲ್ಲಿ ಯಾವುದೇ ಕೊರತೆಯಿಲ್ಲಾ, ಏಜೆನ್ಸಿಗಳು ಇನ್ವಾಯ್ಸ್ ರೈಸ್ ಮಾಡಿದರೇ ಪೂರೈಕೆಯಾಗಲಿದೆ, ಆತಂಕ ಪಡಬೇಕಾದ ಅಗತ್ಯವಿಲ್ಲ, ಜಿಲ್ಲೆಯಲ್ಲಿ ಗೃಹಬಳಕೆಯ 3748 ಸಿಲಿಂಡರ್ ಇದೆ, ವಾಣಿಜ್ಯ ಬಳಕೆಯ 418 ಇದ್ದು, 5 ಕೆಜಿಯ 975 ಸಿಲಿಂಡರ್ ದಾಸ್ತಾನಿದೆ ಎಂದು ಮಾಹಿತಿ ನೀಡಿದರು.
Kshetra Samachara
16/03/2026 03:44 pm
LOADING...