ಚಾಮರಾಜನಗರ: ಪ್ರಸಿದ್ಧ ಯಾತ್ರಸ್ಥಳವಾದ ಹನೂರು ತಾಲೂಕಿನ ಮಲೆ ಮಹದೇಶ್ವರಬೆಟ್ಟ ದೇವಸ್ಥಾನ ಹಾಗೂ ಅರಣ್ಯದ ಪಾವಿತ್ರತೆ ಕಾಪಾಡಲು ಮತ್ತು ಪ್ಲಾಸ್ಟಿಕ್ ಮಾಲಿನ್ಯ ತಡೆಗಾಗಿ ಮೈಸೂರಿನ ಪರಿಸರ ಪ್ರೇಮಿ ಮಂಜುನಾಥ್ ಎಂಬವರು ಏಕಾಂಗಿ ಸೈಕಲ್ ಜಾಥಾ ಆರಂಭಿಸಿದರು.
ಚಾಮರಾಜನಗರ ಜಿಲ್ಲಾಡಳಿತ ಭವನ ಆವರಣದಲ್ಲಿ ಸೈಕಲ್ ಜಾಥಾಗೆ ಜಿಲ್ಲಾಧಿಕಾರಿ ಶ್ರೀರೂಪಾ ಚಾಲನೆ ನೀಡಿ ಶುಭ ಹಾರೈಸಿದರು. ಪರಿಸರ ಪ್ರೇಮಿ ಮಂಜುನಾಥ್ ಮೈಸೂರಿನ ನಿವಾಸಿಯಾಗಿದ್ದು, ಕಳೆದ 2017 ರಿಂದ ದೇಶದ ನಾನಾಭಾಗಕ್ಕೆ ಏಕಾಂಗಿ ಸೈಕಲ್ ಸವಾರಿ ಮೂಲಕ ಪ್ಲಾಸ್ಟಿಕ್ ಮುಕ್ತ ಪರಿಸರ ಅಭಿಯಾನ ನಡೆಸುತ್ತಿದ್ದಾರೆ. ಈಗಾಗಲೇ, 7 ಸಾವಿರ ಕಿಮೀ ಅನ್ನು ಮಂಜುನಾಥ್ ಕ್ರಮಿಸಿದ್ದಾರೆ.
Kshetra Samachara
16/03/2026 03:52 pm
LOADING...