ಗುಂಡ್ಲುಪೇಟೆ : ತಾಲೂಕಿನ ಪಡಗೂರು ಗ್ರಾಮದ ರೈತನ ಜಮೀನಿನಲ್ಲಿ ಹುಲಿ ಸಾವನ್ನಪ್ಪಿದ ಘಟನೆಗೆ ಸಂಬಂಧಿಸಿದಂತೆ ಇಲಾಖೆಯ ಶ್ರೇಣೀಕೃತ ಅಧಿಕಾರಿಗಳ ತಂಡವೇ ಗ್ರಾಮಕ್ಕೆ ಭೇಟಿ ನೀಡಿದ ವೇಳೆ ರೈತರು ರೊಚ್ಚಿಗೆದ್ದ ಪ್ರಸಂಗ ನಡೆಯಿತು.
ವನ್ಯಪ್ರಾಣಿಗಳಿಂದ ರೈತರಿಗೆ ಹಾಗೂ ಜನಸಾಮಾನ್ಯರಿಗೆ ಪ್ರಾಣಹಾನಿ ಸಂಭವಿಸಿದ್ದ ವೇಳೆ ಗಂಭೀರವಾಗಿ ಪರಿಗಣಿಸದ ಅಧಿಕಾರಿಗಳು ಹುಲಿ ಸಾವನ್ನಪ್ಪಿದ ಕೂಡಲೇ ತರಾತುರಿಯಲ್ಲಿ ಕ್ರಮಕ್ಕೆ ಮುಂದಾಗಿರುವ ಇವರು ರೈತರ ವಿಚಾರದಲ್ಲಿ ಅಸಡ್ಡೆ ತೋರುತ್ತಿದ್ದುದು ಅಕ್ಷಮ್ಯವಲ್ಲವೇ ಎಂದು ಆಕ್ರೋಶ ಹೊರಹಾಕಿದ್ದಾರೆ.
ಹುಲಿ ಸಾವನ್ನಪ್ಪಿದ ಗಳಿಗೆಯಲ್ಲೇ ಅಲರ್ಟ್ ಆಗಿರುವ ಇವರು ಅನ್ನದಾತನ ಮೇಲೆ ಉದಾಸೀನತೆ ಹೊಂದಿದ್ದಾರೆ , ವನ್ಯಜೀವಿಗಳ ಹಾವಳಿ ಪ್ರಾಣಹಾನಿ , ಬೆಳೆನಷ್ಟ ಇನ್ನಿತರ ವಿಚಾರಗಳಲ್ಲಿ ಮಲತಾಯಿ ಧೋರಣೆ ತೋರಿರುವ ಡಿಸಿಎಫ್ ಹಾಗೂ ಎಸಿಎಫ್ ವಿರುದ್ಧ ಎಫ್ ಐ ಆರ್ ದಾಖಲಿಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮುತ್ತುರಾಜ್‌ಗೆ ಒತ್ತಾಯಿಸಿದ್ದಾರೆ.
ಸ್ಥಳದಲ್ಲಿ ಭಾರಿ ಹೈಡ್ರಾಮವೇ ನಡೆದಿದ್ದು ಹುಲಿ ಕಳೇಬರ ಸ್ಥಳಾಂತರಿಸಲು ಅವಕಾಶ ನೀಡುವುದಿಲ್ಲ ಎಂದು ಪಟ್ಟುಹಿಡಿದಿರುವ ರೈತರು ರಸ್ತೆಗೆ ಅಡ್ಡಲಾಗಿ ಮರದ ದಿಮ್ಮಿಗಳನ್ನಿರಿಸಿ ಪ್ರತಿಭಟನೆ ನಡೆಸಿದ್ದಾರೆ.
ಶಿವಕುಮಾರ್ ಪಬ್ಲಿಕ್ ನೆಕ್ಸ್ಟ್ ಗುಂಡ್ಲುಪೇಟೆ
PublicNext
17/03/2026 04:44 pm
LOADING...