ಚಾಮರಾಜನಗರ:- ಚಾಮರಾಜನಗರದಲ್ಲಿ ಆಲಿಕಲ್ಲು ಮಳೆ ಅಬ್ಬರ ಜೋರಾಗಿದೆ. ಚಾಮರಾಜನಗರ ಜಿಲ್ಲೆಯ ನಂಜೇದೇವನಪುರ ಹಾಗೂ ಜಿಲ್ಲೆಯ ಗಡಿಭಾಗದ ತಾಳವಾಡಿಯಲ್ಲಿ ಕಂಡೂ ಕೇಳರಿಯದ ರೀತಿಯಲ್ಲಿ ಆಲಿಕಲ್ಲು ಮಳೆಯಾಗಿದೆ. ಈ ಗ್ರಾಮಗಳ ಬೀದಿಬೀದಿಗಳಲ್ಲಿ ಹಾಗೂ ಜಮೀನು, ತೋಟಗಳಲ್ಲಿ ಆಲಿಕಲ್ಲು ರಾಶಿರಾಶಿಯಾಗಿ ಬಿದ್ದಿದ್ದು ಗ್ರಾಮಸ್ಥರು ಆಶ್ಚರ್ಯ ಚಕಿತರಾಗಿದ್ದಾರೆ. ಇದೇ ರೀತಿ ಮುಂದಿನ ದಿನಗಳಲ್ಲಿ ಮಳೆಯಬ್ಬರ ಇದ್ದರೆ ಕಥೆ ಹೇಗಪ್ಪ ಅನ್ನೋ ಆತಂಕ ಜನರಲ್ಲಿ ಶುರುವಾಗಿದೆ. ಕೊಂಚ ಪ್ರಮಾಣದ ಮಳೆ ತಗ್ಗಿದ್ದು ಮತ್ತೆ ಆಲಿಕಲ್ಲು ಮಳೆ ಆಗುವ ಭೀತಿ ಜನರ ಕಾಡುತ್ತಿದೆ.
PublicNext
17/03/2026 10:20 pm
LOADING...