ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗುಂಡ್ಲುಪೇಟೆ : ಹುತ್ತೂರು ಕೆರೆಗೆ ಜಿಲ್ಲಾಧಿಕಾರಿ ರೂಪ ಭೇಟಿ - ಕೆರೆನೀರಿಗಾಗಿ ರೈತರ ಮನವಿ

ಗುಂಡ್ಲುಪೇಟೆ : ತಾಲೂಕಿನ ಹುತ್ತೂರು ಹಾಗೂ ಕಿಲಗೆರೆ ಕೆರೆಗಳಿಗೆ ಭೇಟಿ ನೀಡಿದ ಚಾಮರಾಜನಗರ ಜಿಲ್ಲಾಧಿಕಾರಿ ರೂಪ ಅವರು ರೈತರ ಸಮಸ್ಯೆ ಆಲಿಸುವ ಜೊತೆಗೆ ಕೆರೆಗಳಿಗೆ ನೀರು ತುಂಬಿಸುವ ವಿಚಾರವಾಗಿ ಅಧಿಕಾರಿಗಳಿಂದ ಮಾಹಿತಿ ಪಡೆದರು.

ಜಿಲ್ಲಾಧಿಕಾರಿಗಳ ಮುಂದೆ ಸಮಸ್ಯೆಯ ಬುತ್ತಿ ಬಿಚ್ಚಿಟ್ಟ ರೈತರು ಶಾಸಕರ ನಿರ್ಲಕ್ಷ್ಯ ಮತ್ತು ಮಲತಾಯಿ ಧೋರಣೆಯಿಂದ ತಾಲೂಕಿನ ಕೆರೆಗಳಿಗೆ ನೀರು ತುಂಬಿಸಲಾಗ್ತಿಲ್ಲ, ಕೆರೆಗಳಿಗೆ ನೀರು ಬಿಡಿಸಿ ಎಂದಾಗಲೆಲ್ಲಾ ಸ್ಟ್ರೈಕ್ ಮಾಡಿ ಅಂತಾರೆ, ಇದು ನಮ್ಮ ದೌರ್ಭಾಗ್ಯ, ಮೂರನೇ ಹಂತದ ನೀರು ಬಿಡಿಸಲು ಪ್ರತಿಬಾರಿಯೂ ಪ್ರತಿಭಟನೆ ಮಾಡ್ತಿದ್ದೇವೆ, ರೈತ ಜೀವಜಲಕ್ಕಾಗಿ ಧರಣಿ ನಡೆಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಬೇಸರ ಹೊರಹಾಕಿದರು.

ಸ್ಥಳದಲ್ಲೇ ನೀರಾವರಿ ಇಲಾಖೆ ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡ ಜಿಲ್ಲಾಧಿಕಾರಿಗಳು ರೈತರಿಗೆ ಅಗತ್ಯ ಮಾಹಿತಿ ನೀಡುವ ಕೆಲಸ ಮಾಡಿ, ಕರೆ ಸ್ವೀಕರಿಸದೆ ಬೇಜವಾಬ್ದಾರಿತನ ತೋರುವುದು ಸರಿಯಲ್ಲ ಎಂದು ಗರಂ ಆದರು.

ಕಿಲಗೆರೆ ಹಾಗೂ ಹುತ್ತೂರು ಕೆರೆಗೆ ನೀರು ತುಂಬಿಸಲು ಕ್ರಮ ಕೈಗೊಳ್ಳಲಾಗುವುದು ರೈತರು ಆತಂಕಪಡುವ ಅಗತ್ಯವಿಲ್ಲ ಎಂಬ ಭರವಸೆ ನೀಡಿದರು. ಜಿಲ್ಲಾಧಿಕಾರಿಗಳ ಭರವಸೆ ಮೇಲೆ ನಂಬಿಕೆಯಿದ್ದು ಶೀಘ್ರದಲ್ಲೇ ಕೆರೆಗಳಿಗೆ ನೀರು ಬಿಡಿಸಲು ಕ್ರಮ ಕೈಗೊಳ್ಳಬೇಕು ಇಲ್ಲವಾದಲ್ಲಿ ನಾಲ್ಕನೇ ಹಂತದ ನೀರು ತುಂಬಿಸಲು ಪ್ರತಿಭಟನೆಗೆ ಮುಂದಾಗಬೇಕಾಗುತ್ತದೆ ಎಂದು ರೈತ ಮುಖಂಡ ಕುಂದಕೆರೆ ಸಂಪತ್ತು ಎಚ್ಚರಿಸಿದರು.

Edited By : Manjunath H D
PublicNext

PublicNext

13/03/2026 10:33 pm

Cinque Terre

13.16 K

Cinque Terre

0

ಸಂಬಂಧಿತ ಸುದ್ದಿ