ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಿಸಿಲ ಬೇಗೆಗೆ ತತ್ತರಿಸಿದ್ದ ಹುಬ್ಬಳ್ಳಿ ಜನತೆಗೆ ತಂಪೆರೆದ ಮಳೆರಾಯ...

ಹುಬ್ಬಳ್ಳಿ: ಬಿಸಿಲಿನ ಹೊಡೆತಕ್ಕೆ ತತ್ತರಿಸಿದ್ದ ವಾಣಿಜ್ಯ ನಗರಿ ಹುಬ್ಬಳ್ಳಿಯ ಜನತೆಗೆ ಇಂದು ವರುಣರಾಯ ತಂಪೆರೆದಿದ್ದಾನೆ.

ನಗರದಲ್ಲಿ ಮಧ್ಯಾಹ್ನದಿಂದಲೇ ಮೋಡ ಕವಿದ ವಾತಾವರಣವಿದ್ದು, ಸಂಜೆ ಸಮಯಕ್ಕೆ ಗುಡುಗು ಸಹಿತ ಮಳೆರಾಯ ತನ್ನ ಅರ್ಭಟ ತೋರಿಸಿದ್ದಾನೆ.

ವರ್ಷಧಾರೆ ಅರ್ಭಟ ತೋರುತ್ತಿದ್ದಂತೆ ವಾಹನ ಸವಾರರು ಮಳೆ ಹನಿಗಳಿಂದ ತಪ್ಪಿಸಿಕೊಳ್ಳಲು ವಾಣಿಜ್ಯ ಮಳಿಗೆಗಳ ಮೊರೆ ಹೋಗುವ ದೃಶ್ಯಗಳು ಕಂಡು ಬಂದವು. ಮರದ ಹತ್ತಿರ ನಿಲ್ಲಿಸಿದ್ದ ಬೈಕ್ ಗಳ ಮೇಲೆ ಮರದ ಕೊಂಬೆಗಳು ಬಿದ್ದಿದ್ದು ಕಂಡು ಬಂದಿದೆ.

ಈ ಮಳೆಯೂ ನಗರದ ಜನತೆಗೆ ತಂಪೆರೆದರೆ, ರೈತ ಸೇರಿದಂತೆ ಮಾವು ಬೆಳೆಗಾರರ ಮೊಗದಲ್ಲಿ ಮಳೆರಾಯ ಮಂದಹಾಸ ಮೂಡಿಸಿದೆ. ಕೆಲವು ರೈತರು ಹೊಲಗಳಲ್ಲಿ ಗೋವಿನ ಜೋಳವಿದ್ದು, ಎಲ್ಲಿ ನಾಶವಾಗುತ್ತವೆ ಎಂಬ ಭೀತಿ ಮನೆ ಮಾಡಿದೆ.

Edited By :
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

17/03/2026 07:00 pm

Cinque Terre

60.96 K

Cinque Terre

0

ಸಂಬಂಧಿತ ಸುದ್ದಿ