ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ : ಕಾಶ್ಮೀರವಾದ ಕಲಘಟಗಿ ಎಲ್ಲಿ ನೋಡಿದ್ರೂ ಆಲಿಕಲ್ಲುಗಳ ರಾಶಿ ಆಲಿಕಲ್ಲು ಹೊಡೆತಕ್ಕೆ ಅಪಾರ ನಷ್ಟ

ಕಲಘಟಗಿ : ನಿನ್ನೆ ಸಂಜೆ ಕಲಘಟಗಿ ಪಟ್ಟಣ ಹಾಗೂ ಬೆಲವಂತರ ಗ್ರಾಮದಲ್ಲಿ ಸುರಿದ ಭಾರಿ ಪ್ರಮಾಣದ ಆಲಿಕಲ್ಲು ಮಳೆಗೆ ಕಲಘಟಗಿ ಪಟ್ಟಣ ಹಾಗೂ ಬೆಲವಂತರ ಗ್ರಾಮ ತತ್ತರಿಸಿ ಹೋಗಿವೆ.

ರಸ್ತೆ ಹಾಗೂ ಹೊಲಗಳಲ್ಲಿ ಆಲಿಕಲ್ಲಿನಿಂದ ಮುಚ್ಚಿ ಹೋಗಿದ್ದವು ನಿನ್ನೆ ಸಂಜೆ ಕಲಘಟಗಿ ಹಾಗೂ ಬೆಲವಂತರ ಗ್ರಾಮ ಒಂದು ರೀತಿ ಕಾಶ್ಮೀರವಾಗಿ ಹೋಗಿತ್ತು.

ರಸ್ತೆಯಲ್ಲಿ ವಾಹನಗಳು ಓಡಾಡಲು ಹರಸಾಹಸ ಪಡುವಂತಾಗಿತ್ತು. ಯುವಕರು ಆಲಿಕಲ್ಲುಗಳಿಂದ ಆಟವಾಡುವ ದೃಶ್ಯ ಕಂಡುಬಂದಿತು. ಪ್ರಕೃತಿಯ ಈ ಬದಲಾವಣೆಗೆ ಕೆಲವರಿಗೆ ಖುಷಿ ತಂದರೆ ಕೆಲವು ಜನರಿಗೆ ಸಂಕಟ ತಂದಿದೆ. ಆಲಿಕಲ್ಲು ಹೊಡೆತಕ್ಕೆ ಮನೆಗಳ ಹಂಚುಗಳು ಒಡೆದು ಮನೆ ತುಂಬಾ ನೀರು ನುಗ್ಗಿದೆ.

ಅಷ್ಟೆ ಅಲ್ಲದೆ ಮಾವಿನ ತೋಟದಲ್ಲಿ ಮಾವಿನಕಾಯಿಗಳು ಸಂಪೂರ್ಣ ಬಿದ್ದು ಹೋಗಿದ್ದು ಮಾವು ಬೆಳೆಗಾರರು ಸಂಕಷ್ಟಕ್ಕೆ ಎದುರಾಗಿದ್ದಾರೆ. ಆಲಿಕಲ್ಲು ಬಿದ್ದಿರುವ ಕಾರಣ ಕೆರೆಗಳಲ್ಲಿ ತಂಪು ಹೆಚ್ಚಾಗಿ ಮೀನುಗಳು ಕೆರೆದಂಡೆಗೆ ಬಂದು ಸಾವನ್ನಪ್ಪಿವೆ. ನಿನ್ನೆ ಆದಂತ ಆಲಿಕಲ್ಲು ಮಳೆಗೆ ತಾಲ್ಲೂಕಿನಲ್ಲಿ ಬಹಳಷ್ಟು ನಷ್ಟವಾಗಿದ್ದು ಸರ್ಕಾರ ಕೂಡಲೇ ಪರಿಹಾರ ನೀಡಬೇಕಾಗಿದೆ.

ವರದಿ : ಉದಯ ಗೌಡರ ಪಬ್ಲಿಕ್ ನೆಕ್ಸ್ಟ್ ಕಲಘಟಗಿ

Edited By :
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

18/03/2026 02:42 pm

Cinque Terre

67.21 K

Cinque Terre

6

ಸಂಬಂಧಿತ ಸುದ್ದಿ