ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ: ಸೌಹಾರ್ದತೆಯ ಬೀಜ ಬೆಳೆಸಲು ಶ್ರೀಮಠ ಸದಾ ಸಿದ್ಧ; ವೀರಬಸವ ದೇವರು

ನವಲಗುಂದ: ರೈತ ಬಂಡಾಯಕ್ಕೆ ಹೆಸರಾದ ನವಲಗುಂದ ತಾಲೂಕಿನಲ್ಲಿ ಸೌಹಾರ್ದತೆಗೆ ಸಾಕ್ಷಿಯಾಗಿ ಹಲವಾರು ಪುಣ್ಯಪುರುಷರ ನಾಡಾಗಿಯೂ ಪ್ರಸಿದ್ಧಿ ಪಡೆದಿದ್ದು, ಇದರ ಜತೆಗೆ ಹೊಸದಾಗಿ ಪಟ್ಟಣದ ಪಂಚಗ್ರಹ ಹಿರೇಮಠವೂ ಪ್ರಥಮವಾಗಿ ಸೇರ್ಪಡೆಗೊಂಡು ಸೌಹಾರ್ದತೆಯ ಬೀಜ ಬೆಳೆಸಲು ಸಾಕ್ಷಿಯಾಗಿದೆ ಎಂದು ಹಿರೇಮಠದ ನಿಯೋಜಿತ ಪೀಠಾಧಿಕಾರಿ ಶ್ರೀವೀರಬಸವ ಸ್ವಾಮಿಜಿ ಅಭಿಪ್ರಾಯ ಪಟ್ಟರು.

ನಗರದ ಹಿರೇಮಠದಲ್ಲಿ ರಂಜಾನ ಹಬ್ಬದ ನಿಮಿತ್ತ ಆಯೋಜಿಸಿದ್ದ ಸೌಹಾರ್ದ ಇಫ್ತಿಯಾರ್ ಕೂಟದ ಸಾನಿಧ್ಯ ವಹಿಸಿ ಮಾತನಾಡಿದ ಅವರು ಎಲ್ಲ ಧರ್ಮದಲ್ಲಿಯೂ ಪರಸ್ಪರ ಪ್ರೀತಿ ವಿಶ್ವಾಸಗಳಿಗೆ ಆದ್ಯತೆಗಳಿದ್ದರೂ ಕೆಲ ಭಿನ್ನಾಭಿಪ್ರಾಯಗಳಿಂದ ಭಾವೈಕ್ಯತೆಗೆ ಆದ್ಯತೆ ಇಲ್ಲದಿರುವುದರಿಂದ ಸಮಾಜದಲ್ಲಿ ಸಮಾನತೆ ಕಾಯ್ದುಕೊಳ್ಳುವುದು ಅವಶ್ಯವಾಗಿದ್ದು, ಎಲ್ಲರೂ ಜಾತಿ, ಧರ್ಮ ಮೀರಿ ಮಾನವೀಯ ಮೌಲ್ಯ ಇಟ್ಟುಕೊಂಡು ಶಾಂತಿಯಿಂದ ಬದುಕಿದಲ್ಲಿ ಜೀವನದಲ್ಲಿ ನೆಮ್ಮದಿ ಸಾಧ್ಯ ಎಂದರು.

ಯುವ ಕಾಂಗ್ರೆಸ್ ಮುಖಂಡ ವಿನೋದ ಅಸೂಟಿ ಮಾತನಾಡಿ ಶ್ರೀಮಠ ಸ್ವಾಮೀಜಿಯವರ ಸೌಹಾರ್ದಯುತ ನಡೆಯಿಂದ ತಾಲೂಕಿನಲ್ಲಿ ಶಾಂತಿ ನೆಲೆಸಿ ಎಲ್ಲರೂ ಒಂದಾಗಿ ಬಾಳುವಂತಹ ದಿನಗಳು ಬರಲಿ ಎಂದರು.

ಇಸ್ಲಾಂ ಧರ್ಮಗುರುಗಳಾದ ಇಬ್ರಾಹಿಂಸಾಬ ಕೊಡ್ಲೆಪೇಟೆ, ಬಸೀರಹಮ್ಮದ ಮಕಾನದಾರ, ಸಲೀಂ ಖಾಜಿ, ಬಾಬಾಜಾನ ಮುಲ್ಲಾ, ಅಬ್ಬಾಸ ದೇವರಿಡು, ಅಣ್ಣಪ್ಪ ಬಾಗಿ, ಯಲ್ಲಪ್ಪ ಭೋವಿ, ಶಶಿಧರ ಭರತಭೋಜನಮಠ, ಶಿವಣ್ಣ ದುತಾರಿ, ಮಲ್ಲಿಕಾರ್ಜುನ ಜಲಾದಿ, ಮರಿತಮ್ಮಪ್ಪ ಹಳ್ಳದ ಸೇರಿದಂತೆ ನೂರಾರು ಜನ ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

17/03/2026 08:55 pm

Cinque Terre

7.97 K

Cinque Terre

2

ಸಂಬಂಧಿತ ಸುದ್ದಿ