ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ: ನಾಳೆ ಯುಗಾದಿ ಹಬ್ಬದ ಅಂಗವಾಗಿ ಭವ್ಯ ಶೋಭಾಯಾತ್ರೆ

ನವಲಗುಂದ: ಯುಗಾದಿ ಉತ್ಸವ ಸಮಿತಿ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ನಾಳೆ ಯುಗಾದಿ ಪಾಡ್ಯದ ದಿನದಂದು ಭವ್ಯ ಶೋಭಾಯಾತ್ರೆ ಆಯೋಜನೆ ಮಾಡಲಾಗಿದೆ.

ನಗರದ ಗಣಪತಿ ದೇವಸ್ಥಾನದಿಂದ ಮಧ್ಯಾಹ್ನ 3ಘಂಟೆಗೆ ಗೋಮಾತೆಯ ಪೂಜೆ ನೆರವೇರಿಸಿ ನಂತರ ರಥದಲ್ಲಿ ಭಾರತ ಮಾತೆಯ ವಿಗ್ರಹದೊಂದಿಗೆ ಹಾಗೂ ಮಠಾಧೀಶರ ನೇತೃತ್ವದಲ್ಲಿ ಸಕಲ ಮಂಗಲ ವಾದ್ಯಗಳೊಂದಿಗೆ ಭವ್ಯ ಶೋಭಾಯಾತ್ರೆ ಪ್ರಾರಂಭಗೊಂಡು ನಗರದ ಪ್ರಮುಖ ರಸ್ತೆಯಲ್ಲಿ ಸಂಚರಿಸುವುದು.

ತಾಲೂಕಿನ ಜನತೆ ಮತ್ತು ಯುವಕರು ಪಾಲ್ಗೊಂಡು ಶೋಭಾಯಾತ್ರೆ ಯಶಸ್ವಿಗೊಳಿಸಬೇಕು ಎಂದು ಯುಗಾದಿ ಉತ್ಸವ ಕಮೀಟಿ ಪ್ರಕಟಣೆಗೆ ತಿಳಿಸಿದ್ದಾರೆ.

Edited By : PublicNext Desk
Kshetra Samachara

Kshetra Samachara

18/03/2026 02:08 pm

Cinque Terre

14.69 K

Cinque Terre

0

ಸಂಬಂಧಿತ ಸುದ್ದಿ