ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ: ಎಸ್ಎಸ್ಎಲ್ ಸಿ ಪರೀಕ್ಷೆಗೆ 2557 ವಿದ್ಯಾರ್ಥಿಗಳು ಹಾಜರು

ನವಲಗುಂದ: ರಾಜ್ಯಾದ್ಯಾಂತ ಇಂದು ನಡೆದ ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ನವಲಗುಂದ ವಲಯದ 9 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಗಳು ನಡೆದವು.

ಅದರಲ್ಲಿ ರೆಗ್ಯುಲರ್ 2412 ವಿದ್ಯಾರ್ಥಿಗಳು, ಪುನರಾವರ್ತಿತ 89 ವಿದ್ಯಾರ್ಥಿಗಳು, ಖಾಸಗಿ 48 ವಿದ್ಯಾರ್ಥಿಗಳು, ಖಾಸಗಿ ಪುನರಾವರ್ತಿತ 8 ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 2557 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 16 ಜನ ವಿದ್ಯಾರ್ಥಿಗಳು ಪರೀಕ್ಷೆಗೆ ಗೈರು ಹಾಜರಾಗಿದ್ದಾರೆ.

ಇನ್ನೂ ಪಟ್ಟಣದ ಮಾಡೆಲ್ ಹೈಸ್ಕೂಲ್ ನಲ್ಲಿ ಪರೀಕ್ಷೆಗೆಂದು ಆಗಮಿಸಿದ ವಿದ್ಯಾರ್ಥಿಗಳಿಗೆ ಗುಲಾಬಿ ಹೂವು ಕೊಟ್ಟು ಪರೀಕ್ಷೆಗೆ ಭಯ ಪಡಬೇಡಿ ಎಂದು ಸ್ವಾಗತ ಮಾಡಿಕೊಂಡರು.

Edited By : PublicNext Desk
Kshetra Samachara

Kshetra Samachara

18/03/2026 07:37 pm

Cinque Terre

4.29 K

Cinque Terre

0

ಸಂಬಂಧಿತ ಸುದ್ದಿ