ಯಲ್ಲಾಪುರ: ಕೃಷಿ ಇಲಾಖೆಯ ಆತ್ಮಾ ಯೋಜನೆಯ ಅಡಿಯಲ್ಲಿ ಇಲಾಖೆಯ ವತಿಯಿಂದ ನಿರಂತರವಾಗಿ ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸಿ ರೈತರಿಗೆ ಉಪಯುಕ್ತವಾದ ಕೃಷಿ ತಂತ್ರಜ್ಞಾನ ಅಳವಡಿಕೆ ಬಗ್ಗೆ, ಬೆಳೆಗಳಿಗೆ ತಗುಲುವ ರೋಗಬಾಧೆ ನಿವಾರಣೆ ಬಗ್ಗೆ ಹಾಗೂ ರೈತರಿಗೆ ಉಪಯುಕ್ತವಾದ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದೇವೆ ಎಂದು ಸಹಾಯಕ ಕೃಷಿ ನಿರ್ದೇಶಕ ನಾಗರಾಜ ನಾಯ್ಕ ಹೇಳಿದರು. ಕೃಷಿ ಇಲಾಖೆಯ ವತಿಯಿಂದ ಪಟ್ಟಣದ ಶಕ್ತಿ ಗಣಪತಿ ದೇವಾಲಯದ ಸಭಾಭವನದಲ್ಲಿ ನಡೆದ ಕಿಸಾನ್ ಗೋಷ್ಠಿಯಲ್ಲಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ತಾಲೂಕಾ ಕೃಷಿಕ ಸಮಾಜದ ಅಧ್ಯಕ್ಷ ವೆಂಕಟ್ರಮಣ ಭಟ್ಟ ಕಾರೆಮನೆ ಮಾತನಾಡಿ, ಬೆಳೆಗಳಿಗೆ ಕಾಡುವ ವಿವಿಧ ರೋಗಗಳ ನಿಯಂತ್ರಣದ ಬಗ್ಗೆ ಇಲಾಖೆಯು ನಡೆಸುತ್ತಿರುವ ಪ್ರಯತ್ನಕ್ಕೆ ರೈತರರು ಸರಿಯಾಗಿ ಸ್ಪಂದಿಸಬೇಕು. ಇಲಾಖೆಯ ಜೊತೆ ರೈತರು ಕೈಜೋಡಿಸಬೇಕು ಎಂದರು.
ತಾಲೂಕಾ ಆತ್ಮಾ ಸಮೀತಿಯ ಅಧ್ಯಕ್ಷ ಗಣೇಶ ಹೆಗಡೆ ಕಾರ್ಯಕ್ರಮವನ್ನು ಉದ್ಘಾಟಿಸಿದರು.ನಿವೃತ್ತ ಸಹಾಯಕ ಕೃಷಿ ನಿರ್ದೇಶಕ ಶಂಕರ ಹೆಗಡೆ, ಸತೀಶ ಹೆಗಡೆ ಮುಂತಾದವರು ಉಪಸ್ಥಿತರಿದ್ದರು.
Kshetra Samachara
18/03/2026 12:33 pm
LOADING...