ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸ್ವಯಂ ಸೇವಕನಾಗಿ ರಕ್ಷಣೆಗೆ ಮುಂದಾದರೆ ಮಾತ್ರ ಪರಿಸರ ಉಳಿಸಲು ಸಾಧ್ಯ

ಸಿದ್ದಾಪುರ : ಮನುಷ್ಯನು ತನ್ನ ಸ್ವಾರ್ಥಗಳಿಗೆ ಪರಿಸರವನ್ನು ನಾಶಗೊಳಿಸದೆ ಸ್ವಯಂ ಸೇವಕನಾಗಿ ರಕ್ಷಣೆಗೆ ಮುಂದಾದರೆ ಮಾತ್ರ ಪರಿಸರ ಉಳಿಸಲು ಸಾಧ್ಯ ಎಂದು ಬಿ ಇ ಒ ಎಂ ಎಚ್ ನಾಯ್ಕ್ ಹೇಳಿದರು. ಅವರು ಶುಕ್ರವಾರ ಸಿದ್ದಾಪುರ ತಾಲೂಕಿನ ಮುಟ್ಟಳ್ಳಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಂಚಿತ್ ಪೌಂಡೇಶನ್ ಮತ್ತು ವಿಸ್ಮಯ ಇಕೋ ಕ್ಲಬ್ ಸಂಯುಕ್ತ ಆಶ್ರಯದಲ್ಲಿ ನಡೆದ ಪ್ರಕೃತಿ ಸಮ್ಮಿಲನ ಕಾರ್ಯಕ್ರಮವನ್ನು ಗಿಡಗಳಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ಮನುಷ್ಯನು ತನ್ನ ಸ್ವಾರ್ಥಗಳಿಗೆ ಪರಿಸರವನ್ನು ನಾಶಗೊಳಿಸದೆ ಸ್ವಯಂ ಸೇವಕನಾಗಿ ರಕ್ಷಣೆಗೆ ಮುಂದಾದರೆ ಮಾತ್ರ ಪರಿಸರ ಉಳಿಸಲು ಸಾಧ್ಯ. ಪ್ರಕೃತಿಯ ಕುರಿತು ಮುಂದಿನ ಪೀಳಿಗೆಗೆ ಅರಿವನ್ನು ಮೂಡಿಸುವ ಅನಿವಾರ್ಯತೆ ಇದೆ ಆದ್ದರಿಂದ ಪ್ರಕೃತಿ ಸಮ್ಮಿಲನವೆಂಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಪ್ರಪಂಚದಲ್ಲಿಯೇ ಅತ್ಯಂತ ಬುದ್ಧಿವಂತ ಪ್ರಾಣಿ ಎಂದರೆ ಮನುಷ್ಯ ಮಾತ್ರ ಆದರೆ ಮನುಷ್ಯನ ಅಹಂನಿಂದಾಗಿ ಪ್ರಕೃತಿಯು ವಿನಾಶದ ಅಂಚಿಗೆ ತಲುಪಿದೆ. ಪರಿಸರ ತಜ್ಞ ನಾಗೇಶ್ ಹೆಗಡವರು ತಮ್ಮ ಒಂದು ಲೇಖನದಲ್ಲಿ ಭೂಮಿಯ ಜೀವಮಾನವನ್ನು 24 ಗಂಟೆಗಳಲ್ಲಿ ಲೆಕ್ಕಿಸಿ ಭೂಮಿಯು ತನ್ನನ್ನು ತಾನು ತಂಪಾಗಿಸಲು 8 ಗಂಟೆಯನ್ನು ಇನ್ನುಳಿದ 8 ಗಂಟೆಗಳಲ್ಲಿ ಪ್ರಕೃತಿ ಮೂಡಲು ನಂತರದ ಗಂಟೆಗಳಲ್ಲಿ ಜಲಚರ ಹಾಗೂ ಮನುಷ್ಯನ ಉಗಮವಾಯಿತು ಎಂದು ಪ್ರತಿಪಾದಿಸಿದ್ದಾರೆ ಮಾನವನ ವಿಕಸನದೊಂದಿಗೆ ಪರಿಸರದ ಅವನತಿಯು ಪ್ರಾರಂಭವಾಗಿದ್ದು ಬೇಸರದ ಸಂಗತಿ ಆದ್ದರಿಂದ ನಾವುಗಳು ಈಗಿಂದಲೇ ಜಾಗೃತರಾಗಿ ಪರಿಸರ ಸಂರಕ್ಷಣೆಗೆ ತೊಡಗಿಸಿಕೊಳ್ಳಬೇಕು ಎಂದು ಮಕ್ಕಳಿಗೆ ಹೇಳಿದರಲ್ಲದೆ ದುರಾಸೆಯ ಪರಿಣಾಮವನ್ನು ಕತೆಯ ಮೂಲಕ ಮಕ್ಕಳಿಗೆ ಮನದಟ್ಟು ಮಾಡಿದರು.

ಉಪವಲಯ ಅರಣ್ಯಾಧಿಕಾರಿ ಗುಡದಯ್ಯ ಮಾತನಾಡಿ , ಮನುಷ್ಯ ಅತಿಯಾಸೆಯನ್ನು ತೊರೆದಾಗ ಮಾತ್ರ ಪ್ರಕೃತಿಯನ್ನು ಉಳಿಸಲು ಸಾಧ್ಯ.ಹಲವಾರು ಜೀವ ಜಂತುಗಳ ಅಸ್ತಿತ್ವಗಳು ಈಗಾಗಲೇ ನಶಿಸಿಹೋಗಿದ್ದು ಮುಂದೊಂದು ದಿನ ಮನುಷ್ಯನ ಅಸ್ತಿತ್ವಗಳು ನಶಿಸಿಹೋಗುವ ಸಮಯ ಸನಿಹವಾಗುತ್ತಿದೆ ಆದ್ದರಿಂದ ಪ್ರಕೃತಿ ಸಂರಕ್ಷಣೆಯ ಮೊದಲ ಹೆಜ್ಜೆ ನಾವು ಮುಂದೆ ಇಡಬೇಕು, ನಮ್ಮ ಸುತ್ತಮುತ್ತಲಿನ ಪರಿಸರವನ್ನು ರಕ್ಷಿಸಬೇಕು ಎಂದು ಹೇಳಿದರು.

ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ರಮೇಶ್ ಹೆಗಡೆ ಹಾರ್ಸಿಮನೆ ಮಾತನಾಡಿ, ಪ್ರಕೃತಿಯನ್ನು ದೇವತೆಯ ರೂಪದಲ್ಲಿ ಪೂಜಿಸಿಕೊಂಡು ಬಂದ ಸಂಸ್ಕೃತಿ ನಮ್ಮದಾಗಿದ್ದು ಅದನ್ನು ಸಂರಕ್ಷಿಸಬೇಕಾಗಿರುವುದು ಕೂಡ ನಮ್ಮ ಹೊಣೆಯಾಗಿದೆ. ಕಳೆದೆರೆಡು ದಿನಗಳಿಂದ ಆಗುತ್ತಿರುವ ಆಲಿಕಲ್ಲು ಮಳೆಯಾಗಲಿ ಅಥವಾ ಇನ್ನಿತರ ಪ್ರಕೃತಿ ವಿಕೋಪಗಳು ಮಾನವನ ಅಲಕ್ಷಗಳಿಂದ ಉಂಟಾಗುತ್ತಿದ್ದು ಮುಂದೊಂದು ದಿನ ಪ್ರಕೃತಿ ಸಮತೋಲನ ಕಳೆದುಕೊಂಡು ದೊಡ್ಡ ಮಟ್ಟದ ದುಷ್ಪರಿಣಾಮಗಳನ್ನು ಮಾನವನು ಎದುರಿಸಬೇಕಾಗುತ್ತದೆ ಆದ್ದರಿಂದ ಕೂಡಲೇ ಜಾಗೃತರಾಗಿ ಮುಂಬರುವ ಅನಾಹುತವನ್ನು ತಪ್ಪಿಸೋಣ ಮಕ್ಕಳು ಅಧ್ಯಯನದ ಜೊತೆಗೆ ವಾರ್ತಾ ಪತ್ರಿಕೆಗಳನ್ನು ಓದುವ ರೂಢಿಯನ್ನು ಬೆಳೆಸಿಕೊಳ್ಳಬೇಕು , ಪತ್ರಿಕೋದ್ಯಮದಲ್ಲಿ ಹಲವಾರು ಪರಿಸರ ಸಂರಕ್ಷಣಾ ಕುರಿತು ವಿಶೇಷ ಲೇಖನಗಳು ಹಾಗೂ ಮಾಹಿತಿಗಳು ದೊರೆಯುತ್ತದೆ ಜ್ಞಾನದ ಮುಖಾಂತರ ಪರಿಸರ ಸಂರಕ್ಷಣೆಗೆ ದಾರಿ ಅಂಚಿತ್ ಪೌಂಡೇಶನ್ ಅಧ್ಯಕ್ಷ ಶ್ರೀಧರ್ ಹೆಗಡೆ ಪ್ರಾಸ್ತಾವಿಕ ಮಾತನಾಡಿ, ಅಂಚಿತ್ ಪೌಂಡೇಶನ್ ಎಲ್ಲ ಕ್ಷೇತ್ರದಲ್ಲಿಯೂ ಸೇವೆಯನ್ನು ಮಾಡುವ ಆಶಯವನ್ನು ಹೊಂದಿದ್ದು ಜೀವ ಸಂಕುಲದ ಆಧಾರ ಬಿಂದುವಾದ ಪ್ರಕೃತಿಯ ಸಂರಕ್ಷಣೆಯಿಂದಲೇ ಮೊದಲ ಹೆಜ್ಜೆ ಇಡುವ ಪ್ರಯತ್ನ ಮಾಡುತ್ತಿದೆ. ವಿಸ್ಮಯ ಇಕೋ ಕ್ಲಬ್ ನ ಸಹಕಾರದಿಂದ ಮುಟ್ಟಳ್ಳಿಯ ಶಾಲೆಯಲ್ಲಿ ಕಾರ್ಯಕ್ರಮ ನಡೆಸಿ ಮಕ್ಕಳ ಮುಖಾಂತರ ಸಂರಕ್ಷಣೆಯತ್ತ ಸಾಗುತ್ತಿರುವ ಈ ಪ್ರಯತ್ನವು ಸಂತಸ ತಂದಿದೆ ಎಂದು ಹೇಳಿದರು.

ಶಾಲೆಯ ಎಸ್ ಡಿಎಂಸಿ ಅಧ್ಯಕ್ಷ ಅನಂತ ಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಮುಖ್ಯೋಪಾಧ್ಯಾಯಿನಿ ಸುಚಿತ್ರ ಸ್ವಾಗತಿಸಿದರು. ಶಿಕ್ಷಕ ಗಿರೀಶ್ ನಾಯ್ಕ್ ನಿರೂಪಣೆ ಮಾಡಿದರು. ತ್ರಿವೇಣಿ ನಾಯ್ಕ್ ವಂದನಾರ್ಪಣೆ ಮಾಡಿದರು.

Edited By : PublicNext Desk
Kshetra Samachara

Kshetra Samachara

21/03/2026 11:52 am

Cinque Terre

1.1 K

Cinque Terre

0

ಸಂಬಂಧಿತ ಸುದ್ದಿ