ಬೆಳ್ತಂಗಡಿ:ಕುವೆಟ್ಟು ಗ್ರಾಮದ ಗುರುವಾಯನಕೆರೆಯಲ್ಲಿರುವ 14.72 ಎಕ್ರೆ ವ್ಯಾಪ್ತಿಯಲ್ಲಿ ವ್ಯಾಪಿಸಿರುವ ವಿಶಾಲವಾದ ಕೆರೆಯಲ್ಲಿ ಎರಡು ದಿನಗಳಿಂದ ಮೀನುಗಳು ಸತ್ತು ತೇಲುತ್ತಿದ್ದು ಸ್ಥಳಕ್ಕೆ ವಿವಿಧ ಇಲಾಖಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ನೀರಿನ ಮಾದರಿಗಳನ್ನು ಸಂಗ್ರಹಿಸಿದ್ದಾರೆ.
ಕೆರೆಯ ಎರಡೂ ಬದಿಗಳಲ್ಲಿ ಮೀನುಗಳು ಸತ್ತು ತೇಲುತ್ತಿರುವುದನ್ನು ಗಮನಿಸಿದ ಸ್ಥಳೀಯರು ಈ ಬಗ್ಗೆ ಗ್ರಾಮ ಪಂಚಾಯತ್‌ಗೆ ಮಾಹಿತಿ ನೀಡಿದ್ದಾರೆ. ಕೆರೆಗೆ ತ್ಯಾಜ್ಯಗಳು ಸೇರುತ್ತಿರುವ ಬಗ್ಗೆ ಸ್ಥಳೀಯರು ಆರೋಪ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು ಭೇಟಿ ನೀಡಿ ನೀರಿನ ಮಾದರಿಗಳನ್ನು ಹಾಗೂ ಸತ್ತು ತೇಲುತ್ತಿರುವ ಮೀನುಗಳನ್ನು ಶೇಖರಿಸಿಕೊಂಡು 2. ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.
ಮೀನುಗಾರಿಕಾ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ನೀರಿನ ಮಾದರಿಗಳನ್ನು ಪರಿಶೀಲಿಸಿ ಪಡೆದುಕೊಂಡು ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ. ಸ್ಥಳಕ್ಕೆ ಬೆಳ್ತಂಗಡಿ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಭವಾನಿ ಶಂಕರ್, ಗ್ರಾಪಂ ಅಭಿವೃದ್ದಿ ಅಧಿಕಾರಿ ಹಾಗೂ ಇತರರು ಭೇಟಿ ನೀಡಿ ಪರಿಶೀಲಿಸಿದರು.ಕೆರೆಗೆ ಸ್ಥಳೀಯ ಸಂಸ್ಥೆಯೊಂದರ ತ್ಯಾಜ್ಯ ನೀರು ಸೇರುತ್ತಿರುವ ಕಾರಣದಿಂದ ಮೀನುಗಳು ಅಕಾಲಿಕವಾಗಿ ಸಾಯುತ್ತಿದೆ ಎಂಬ ಆರೋಪ ಸ್ಥಳೀಯರಿಂದ ವ್ಯಕ್ತವಾಗುತ್ತಿದೆ.
ಮೂರು ವರ್ಷಗಳಿಗೆ ಏಲಂ ಮಾಡಿದವರಿಗೆ ಭಾರೀ ನಷ್ಟ ಅತ್ಯಂತ ವಿಶಾಲವಾದಗುರುವಾಯನಕೆರೆ ಕೆರೆಯಲ್ಲಿ ಮೀನುಗಳನ್ನು ಹಾಕಲು ಹಾಗೂ ಮೀನುಗಳನ್ನು ಹಿಡಿಯಲು ಟೆಂಡರ್ ಕರೆದು ನೀಡಲಾಗಿತ್ತು.
ಇದೇ ಗ್ರಾಮದ ಮೀನು ವ್ಯಾಪಾರಿ ರಿಯಾದ್ ಎಂಬವರು ಗ್ರಾಪಂ ಏಲಂನಲ್ಲಿ ಭಾಗವಹಿಸಿ ಮೂರು ವರ್ಷಗಳ ಖಾಯಂ ಅವಧಿಗೆ 6 ಲಕ್ಷ ರೂ.ಗೆ ಪಡೆದುಕೊಂಡಿದ್ದಾರೆ. ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ದ ಕ್ರಮಕೈಗೊಂಡು ನಷ್ಟ ಭರಿಸಿಕೊಡುವಂತೆ ಗ್ರಾಪಂ ಆಡಳಿತಕ್ಕೆ ಲಿಖಿತ ದೂರು ನೀಡಿದ್ದಾರೆ.
Kshetra Samachara
18/03/2026 09:58 pm
LOADING...