ನವಲಗುಂದ: ಹಿಂದೂಗಳ ಹೊಸ ವರ್ಷವಾದ ಯುಗಾದಿ ಹಬ್ಬದ ಅಂಗವಾಗಿ ನಗರದ ಮಹಿಳೆಯರು ದ್ಯಾಮವ್ವ ಮತ್ತು ದುರ್ಗವ್ವನ ದೇವಸ್ಥಾನಕ್ಕೆ ತೆರಳಿ ಉಡಿ ತುಬುವ ಪದ್ಧತಿಯನ್ನು ಪುರಾತನ ಕಾಲದಿಂದಲೂ ನಡೆಸಿಕೊಂಡು ಬಂದಿದ್ದಾರೆ.
ಅದೇ ರೀತಿ ಇಂದು ಕೂಡಾ ಬೆಳಿಗ್ಗೆ ಸೂರ್ಯೋದಯಕ್ಕೂ ಮೊದಲೇ ಉಡಿ ಸಾಮಗ್ರಿ ಹಾಗೂ ಆರತಿ ಹಿಡಿದು ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಪ್ರತಿ ಮನೆಯಿಂದಲೂ ಭಕ್ತರು ಆಗಮಿಸಿ ದೇವಿಯ ಕೃಪೆಗೆ ಪಾತ್ರರಾದರು.
ಈ ವೇಳೆ ಅರ್ಚರಕರುಗಳಾದ ನಿಂಗಪ್ಪ ಬಡಿಗೇರ, ದೇವೇಂದ್ರಪ್ಪ ಬಡಿಗೇರ, ಪ್ರಕಾಶ ಬಡಿಗೇರ, ಬಸವರಾಜ ಬಡಿಗೇರ, ಕುಬೇರ ಬಡಿಗೇರ ಬಂದಂತ ಭಕ್ತರ ಉಡಿ ಸಾಮಗ್ರಿ ತೆಗೆದುಕೊಂಡು ದೇವರಿಗೆ ಸಮರ್ಪಣೆ ಮಾಡಿದರು.
Kshetra Samachara
19/03/2026 04:45 pm
LOADING...