PublicNext Exclusive...
ಹುಬ್ಬಳ್ಳಿ: ದೇವಸ್ಥಾನದಲ್ಲಿ ನಿಧಿ ಎಂದು ಅರ್ಚಕರು ಸೇರಿಕೊಂಡು ರಾತ್ರೋರಾತ್ರಿ ವೆಂಕಟೇಶ್ವರ ದೇವರ ಮೂರ್ತಿಗೆ ಭಗ್ನ ಮಾಡಿ, ತಗ್ಗು ತೆಗೆದಿರುವ ಘಟನೆ ಹಳೇ ಹುಬ್ಬಳ್ಳಿಯ ಅಕ್ಕಿಪೇಟೆಯಲ್ಲಿ ನಡೆದಿದ್ದು, ಸದ್ಯ ದೇವಸ್ಥಾನದ ಕಮಿಟಿ ಆರೋಪಿಗಳನ್ನು ಅರೆಸ್ಟ್ ಮಾಡಬೇಕೆಂದು ಸ್ಥಳೀಯ ಭಕ್ತರು ಪ್ರತಿಭಟನೆ ಮಾಡುತ್ತ ಠಾಣೆ ಮೆಟ್ಟಿಲೇರಿದ್ದಾರೆ.
ಅಕ್ಕಿಪೇಟೆಯಲ್ಲಿ 300 ವರ್ಷದ ಐತಿಹಾಸಿಕ ಪುರಾತನ ಕಾಲದ ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ ನಿಧಿ ಇದೆ ಎಂದು ಅದೇ ದೇವಸ್ಥಾನದ ಅರ್ಚಕರು ಕನ್ನ ಹಾಕಿ ಮಧ್ಯರಾತ್ರಿ ಗರ್ಭಗುಡಿಯಲ್ಲಿರುವ ವೆಂಕಟೇಶ್ವರ ದೇವರ ಮೂರ್ತಿಯನ್ನು ಭಗ್ನ ಮಾಡಿ ಗರ್ಭಗುಡಿಯನ್ನು ಅಗೆದು ದೇವರ ಮೂರ್ತಿಯನ್ನು ಸ್ಥಳಾಂತರ ಮಾಡಿದ್ದಾರೆ. ಬೆಳಗ್ಗೆ ಎದ್ದು ನೋಡಿದ ಭಕ್ತರು ದೇವರ ಮೂರ್ತಿ ಕಾಣದೆ ಇರುವುದಕ್ಕೆ ಆಶ್ಚರ್ಯವಾಗಿದ್ದಾರೆ. ಕೂಡಲೇ ಎಲ್ಲ ಭಕ್ತರು ಸೇರಿ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ನಾರಾಯಣ ಮುತಾಲಿಕ ದೇಸಾಯಿ, ರಮೇಶ ಮುತಾಲಿಕ ದೇಸಾಯಿ ಮತ್ತು ಇನ್ನೊಬ್ಬ ಅವರ ಸಂಬಂಧಿ ಸೇರಿಕೊಂಡು ರಾತ್ರೋ ರಾತ್ರಿ ವೆಂಕಟೇಶ್ವರ ದೇವರ ಬಳಿ ನಿಧಿಗಾಗಿ ಅಗೆದು ದೇವರನ್ನೇ ಸ್ಥಳಾಂತರ ಮಾಡಿದ್ದಾರೆಂದು ದೇವಸ್ಥಾನದ ಕಮಿಟಿ ಆರೋಪ ಮಾಡುತ್ತಿದೆ.
ಅರ್ಚಕರೇ ನಿಧಿಗಾಗಿ ಇಡೀ ದೇವಸ್ಥಾನದ ಗರ್ಭಗುಡಿಯನ್ನೇ ಅಗೆದು ಭಗ್ನ ಮಾಡಿದ್ದಾರೆ. ಅಷ್ಟಕ್ಕೂ ಅದರ ಒಳಗೆ ನಿಧಿ ಇತ್ತಾ...? ಹಾಗಿದ್ರೆ ಅಲ್ಲಿದ್ದ ನಿಧಿ ಎಲ್ಲಿದೇ...? ಇದಿಷ್ಟು ಪೊಲೀಸ್ ತನಿಖೆಯಿಂದ ತಿಳಿದು ಬರಬೇಕಿದೆ.
-ಈರಣ್ಣ ವಾಲಿಕಾರ, ಕ್ರೈಂ ಬ್ಯೂರೋ ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
20/03/2026 05:23 pm
LOADING...