ಬೆಂಗಳೂರು: ಇಂದು ಹೊಸತೊಡಕು ಹಿನ್ನೆಲೆ ಮಾಂಸಕ್ಕೆ ಜನ ಮುಗಿಬಿದ್ದ ದೃಶ್ಯ ಕಂಡು ಬಂತು. ಗುಡ್ಡೆ ಮಾಂಸಕ್ಕೆ ಹೆಚ್ಚಿನ ಬೇಡಿಕೆ ಶುರುವಾಗಿದೆ. ದೇವನಹಳ್ಳಿಯ ಯಲಿಯೂರು ಗ್ರಾಮದಲ್ಲಿ ಎಗ್ಗಿಲ್ಲದೇ ಮಾಂಸ ಮಾರಾಟ ಆಗುತ್ತಿದೆ.
ಗುಡ್ಡೆ ಮಾಂಸಕ್ಕಾಗಿ ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ, ಹೊಸಕೋಟೆಯಿಂದ ಜನರ ಆಗಮನ ಆಗುತ್ತಿದೆ. ಮುಂಜಾನೆ 4 ಗಂಟೆಯಿಂದಲೇ ಕಾದು ಕುಳಿತ ಜನ ಮಾಂಸಕ್ಕೆ ವೈಟ್ ಮಾಡ್ತಾ ಇದ್ದಾರೆ. 800 ರೂ ಇದ್ದ ಮಾಂಸ ಇಂದು 1000 ರೂ.ಗೆ ಏರಿಕೆ ಆಗಿದೆ.
PublicNext
20/03/2026 12:05 pm
LOADING...