ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಬೋ....ಎಂದು ನಾಲಿಗೆ ಹರಿಬಿಟ್ಟ ಕಂಟ್ರೋಲರ್ : ಪಬ್ಲಿಕ್ ನೆಕ್ಸ್ಟ್ ನಲ್ಲಿ ಸುದ್ದಿ ಬಂದ ಕೂಡಲೇ ಕಂಟ್ರೋಲರ್‌ನಿಂದ ಕ್ಷಮೆಯಾಚನೆ

ಹುಬ್ಬಳ್ಳಿ: ಗೋಕುಲ್ ರಸ್ತೆಯ ಹೊಸ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರೊಬ್ಬರೂ ಬಸ್ ಮಾಹಿತಿ ಕೇಳಲು ಹೋದಾಗ ಕಂಟ್ರೋಲರ್ ಪ್ರಯಾಣಿಕನಿಗೆ ಅವಾಚ್ಯವಾಗಿ ನಿಂದನೆ ಮಾಡಿದ್ದ. ಈ ಕುರಿತು ಪಬ್ಲಿಕ್ ನೆಕ್ಸ್ಟ್ ನಲ್ಲಿ ವರದಿ ಪ್ರಸಾರವಾದ ಹಿನ್ನೆಲೆ ಕಂಟ್ರೋಲರ್ ನನ್ನಿಂದ ತಪ್ಪಾಯಿತು ಅಂತಾ ಹೇಳಿದ್ದಾನೆ.

ರವಿವಾರ ರಾತ್ರಿ ಪ್ರಯಾಣಿಕರೊಬ್ಬರೂ ಬೆಂಗಳೂರು- ರಾಯಚೂರು ಬಸ್ ಮಾಹಿತಿ ಕೇಳಲು ಹೋದಾಗ ನಿಂದನೆ ಮಾಡಿ ನಿನ್ನ ಸುಮ್ಮನೇ ಬಿಡಲ್ಲ ಅಂತಾ ಆವಾಜ್ ಹಾಕಿದ್ದ. ಹೀಗಾಗಿ ಪ್ರಯಾಣಿಕ ಚಂದು ಕಂಟ್ರೋಲರ್ ಆವಾಜ್ ಹಾಕಿದ್ದ ವಿಡಿಯೋ ಪಬ್ಲಿಕ್ ನೆಕ್ಸ್ಟ್ ಗೆ ಕಳುಹಿಸಿದ್ದ.

ಪಬ್ಲಿಕ್ ನೆಕ್ಸ್ಟ್ ನಲ್ಲಿ ವಿಡಿಯೋ ಪ್ರಸಾರ ಆಗುತ್ತಿದ್ದ ಹಾಗೆ ಹಿರಿಯ ಅಧಿಕಾರಿಗಳು ಘಟನೆಯ ಕುರಿತು ವರದಿ ಕೇಳಿದ ಕೂಡಲೇ ಕಂಟ್ರೋಲರ್ ಎಚ್ಚೆತ್ತು ನನ್ನಿಂದ ತಪ್ಪಾಗಿದೆ ಅಂತಾ ಪ್ರಯಾಣಿಕನಿಗೆ ಸಾರಿ ಕೇಳಿದ್ದಾನೆ. ಇದು ಪಬ್ಲಿಕ್ ನೆಕ್ಸ್ಟ್ ವಾಹಿನಿಯ ಫಲಶ್ರುತಿ.

ವಿನಯ ರೆಡ್ಡಿ ಪಬ್ಲಿಕ್ ನೆಕ್ಸ್ಟ್

Edited By : Vinayak Patil
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

06/04/2026 09:28 pm

Cinque Terre

59.51 K

Cinque Terre

9

ಸಂಬಂಧಿತ ಸುದ್ದಿ