ಇದು ಬೊಮ್ಮನಹಳ್ಳಿ ವಿಧಾನಸಭಾ ವ್ಯಾಪ್ತಿಯ ಜಿಬಿಎ ದಕ್ಷಿಣ ನಗರ ಪಾಲಿಕೆಗೆ ಒಳಪಡುವ ಅರಕೆರೆ ವಾರ್ಡ್. ಇಲ್ಲಿ ಮುರುಳಿ ಎಂಬುವರು ಈ ಹಿಂದೆ ಕಾರ್ಪೋರೆಟರ್ ಆಗಿದ್ದರೆಂದು ಜನ ನೆನಪಿಸಿಕೊಳ್ಳುತ್ತಾರಷ್ಟೆ. ಇಲ್ಲಿಯೂ ಕೂಡ ಕಸ, ಚರಂಡಿ ಸಮಸ್ಯೆ ಮಾಮೂಲಿನಂತಿದ್ದರೂ, ರಸ್ತೆ ಗುಂಡಿ ಸಮಸ್ಯೆಗೆ ಇನ್ನೂ ಮುಕ್ತಿ ಸಿಕ್ಕಿಲ್ಲ. ಈ ಮೊದಲಿದ್ದಷ್ಟು ಕುಡಿಯುವ ನೀರಿನ ಸಮಸ್ಯೆ ಅರಕೆರೆಯಲ್ಲಿ ಸದ್ಯಕ್ಕೆ ಇಲ್ಲವೆಂದರೂ ಕೂಡ ಬೇಸಿಗೆ ವೇಳೆ ನೀರಿನ ತೊಂದರೆ ತಪ್ಪಿದ್ದಲ್ಲ ಎನ್ನುತ್ತಾರೆ ಇಲ್ಲಿನ ನಿವಾಸಿಗಳು. ಶಾಸಕ ಸತೀಶ್ ರೆಡ್ಡಿ ಅವರ ಕೆಲಸ-ಕಾರ್ಯಗಳ ಬಗ್ಗೆ ಮಿಶ್ರ ಪ್ರತಿಕ್ರಿಯೆ ಕಂಡು ಬಂದಿದೆ.
ಇನ್ನು, ಜಿಬಿಎ ಮೀಸಲಾತಿ ಪಟ್ಟಿಯನ್ನು ಗಮನಿಸಿದರೆ, ಬೊಮ್ಮನಹಳ್ಳಿಯ ಒಟ್ಟು ಇಪ್ಪತ್ತು ವಾರ್ಡ್ ಗಳ ಪೈಕಿ ಅದೇಕೋ ಹತ್ತು ಸಾಮಾನ್ಯ ಮಹಿಳೆಗೆ,
ನಾಲ್ಕು ಸಾಮಾನ್ಯ ಅಭ್ಯರ್ಥಿಗಳಿಗೆ ಅವಕಾಶ ಕಲ್ಪಿಸಲಾಗಿದೆ. ಇನ್ನುಳಿದ ಆರರಲ್ಲಿ ಎಸ್ ಸಿ- ಎಸ್ ಟಿ, ಹಿಂದುಳಿದ ವರ್ಗಗಳಿಗೆ ಅಂತಾ ಬೆರಳೆಣಿಕೆಯಷ್ಟು ಮೀಸಲಾತಿ ನೀಡಲಾಗಿರೋದು ಆಶ್ಚರ್ಯ ತರಿಸಿದೆ.
PublicNext
07/04/2026 09:20 am
LOADING...