ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಾಗಲಗುಂಟೆ ವಾರ್ಡ್ ನಲ್ಲಿ ಸಮಸ್ಯೆ ಇರೋದು ಜನರದ್ದು ಜನನಾಯಕರದ್ದಲ್ಲ..

ಬೆಂಗಳೂರು: ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ವಾರ್ಡ್ ಗಳಲ್ಲಿ ಪಬ್ಲಿಕ್ ನೆಕ್ಸ್ಟ್ ವಾರ್ಡ್ ಸಮಸ್ಯೆಗಳ ಕುರಿತು ಗ್ರೌಂಡ್ ರಿಪೋರ್ಟ್ ಗೆ ಇಳಿದಿತ್ತು. ಈ ಹಿಂದಿದ್ದ ವಾರ್ಡ್ ನಂಬರ್ 14 ಬಾಗಲಗುಂಟೆ ವಾರ್ಡ್ ನಲ್ಲಿ ಜನ ವಾರ್ಡ್ ಕುರಿತು ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ. ಇಲ್ಲಿನ ಜನ ಹಾಲಿ ಶಾಸಕ ಬಿಜಿಪಿಯ ಎಸ್ ಮುನಿರಾಜು ಬಗ್ಗೆ ಪಾಸಿಟಿವ್ ಆಗೆ ರಿಯಾಕ್ಟ್ ಮಾಡಿದ್ದಾರೆ.

ಆದ್ರೆ ಇಲ್ಲಿ ಜನರೆ ಸಮಸ್ಯೆ ಅಂತೆ. ಜನಕ್ಕೆ ಎಷ್ಟು ಹೇಳಿದ್ರು ಕಸ ತಂದು ರೋಡಿಗೆ ಹಾಕ್ತರಂತೆ. ಜಿಬಿಎ ಅಧಿಕಾರಿಗಳಿಗೆ ದೂರು ಹೇಳಿದ್ರೆ ಕಸ ಕ್ಲೀನ್ ಮಾಡಿಸ್ತಾರೆ ಆದ್ರೆ ಜನ ಮಾತ್ರ ರಾತ್ರೋ ರಾತ್ರಿ ಬಂದು ಕಸ ಹಾಕಿ ಹೋಗ್ತಾರೆ ಅಂತ ಇಲ್ಲಿ ಸ್ಥಳೀಯರು ಆರೋಪ ಮಾಡಿದ್ದಾರೆ.

ಇನ್ನೂ ಜಿಬಿಎ ಎಲೆಕ್ಷನ್ ಹತ್ರ ಬರ್ತಿದ್ದು ಕಾರ್ಪೊರೇಟ್ ಇಲ್ಲದೆ ಎಲ್ಲಾ ಸಮಸ್ಯೆಗಳ್ನ ಜನ ಶಾಸಕರ ಬಳಿ ಹೇಳಿಕೊಳ್ಳುವ ಪರಿಸ್ಥಿತಿ ಇಲ್ಲಿದೆ.

ಇಲ್ಲಿ ಕಸದ ಸಮಸ್ಯೆ ಜೊತೆಗೆ ಬೀದಿ ಬದಿ ವ್ಯಾಪಾರಸ್ಥರ ಸಮಸ್ಯೆ ಕೂಡ ಹೆಚ್ಚಾಗಿದ್ಯಂತೆ. ಸಂಜೆ ಆದ್ರೆ ರಸ್ತೆ ಪಕ್ಕದಲ್ಲೆ ವ್ಯಾಪಾರ ಮಾಡ್ತಾರೆ. ಇದ್ರಿಂದ ಟ್ರಾಫಿಕ್ ಸಮಸ್ಯೆ ಆಗುತ್ತೆ. ಕೇಳಿದ್ರೆ ನಾವು ಬಡವರು ನಮ್ಮ ಹೊಟ್ಟೆ ಮೇಲೆ ಹೊಡಿಬೇಡಿ ಅಂತಾರೆ ಏನ್ ಮಾಡೋಣ ಅಂತಾರೆ

ಇನ್ನು ಬಾಗಲಗುಂಟೆಯಲ್ಲಿ ಪಾರ್ಕು, ರೋಡು ಎಲ್ಲಾ ಚೆನ್ನಾಗಿದ್ರೂ ಅಲ್ಲಲ್ಲಿ ಕಸ ,ಕೆಲಸ ರಸ್ತೆ ಗುಂಡಿಗಳು ಹಾಗೂ ಕೆಲ ಕಡೆ ನೀರಿನ ಸಮಸ್ಯೆ ಇದೆ ಅಂತ ಹೇಳಲಾಗ್ತಿದೆ. ಒಟ್ಟಾರೆ ವಾರ್ಡ್ ನೋಡಿದಾಗ ಸಮಸ್ಯೆಗಿಂತ ಅಭಿವೃದ್ಧಿ ಹೆಚ್ಚಾಗಿದೆ ಎಂದು ಕಾಣ ಸಿಗುತ್ತೆ ವಾರ್ಡ್ ನಲ್ಲಿ.

Edited By : Somashekar
PublicNext

PublicNext

07/04/2026 01:04 pm

Cinque Terre

4.59 K

Cinque Terre

0

ಸಂಬಂಧಿತ ಸುದ್ದಿ