ಚಾಮರಾಜನಗರ: ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಮುಡುಗುಂಡ ಗ್ರಾಮದಲ್ಲಿ ಮಳೆಗಾಗಿ ವಿಶೇಷ ಪೂಜೆ ಪುನಸ್ಕಾರ ಮಾಡಲಾಗಿದೆ. ಉಯ್ಯೋ ಉಯ್ಯೋ ಮಳೆರಾಯ ಬಸವನಕಟ್ಟೆಗೆ ನೀರಿಲ್ಲ ಎಂದು ಹಾಡುತ್ತಾ ಮಕ್ಕಳು ಮರದ ಬಸವನ ಮೂರ್ತಿ ಹೊತ್ತು ಮೆರವಣಿಗೆ ನಡೆಸಿದರು.
ಈ ವೇಳೆ ಪ್ರತಿಮನೆಯವರು ಮನೆಮನೆಗಳ ಮುಂದೆ ಬಸವನ ಮೂರ್ತಿಗೆ ಹಾಗೂ ಬಸವನ ಮೂರ್ತಿ ಹೊತ್ತ ಮಕ್ಕಳಿಗೆ ನೀರು ಉಯ್ದರು. ಈ ವೇಳೆ ವರುಣದೇವನಿಗೆ ರಾಗಿ ಅಂಬಲಿ, ಹುರುಳಿ ಹಾಗು ನುಗ್ಗೆ ಸೊಪ್ಪಿನ ಪಲ್ಯ ಮತ್ತು ಬೆಲ್ಲದ ಅನ್ನದ ನೈವೇದ್ಯ ಮಾಡಿ ಸಾರ್ವಜನಿಕರಿಗೆ ಪ್ರಸಾದ ವಿನಿಯೋಗಿಸಲಾಯಿತು.
PublicNext
13/04/2026 10:47 pm
LOADING...