ಚಾಮರಾಜನಗರ : ಜಿಲ್ಲೆ ವಿ.ಸಿ.ಹೊಸೂರು ಗ್ರಾಮದಲ್ಲು ವರುಣ ದೇವನಿಗೆ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥಿಸಲಾಯ್ತು. ಗ್ರಾಮದ ಶ್ರೀ ಚಂಗೂರು ಮಾರಮ್ಮ ದೇವಾಲಯದಲ್ಲಿ ಪೂಜೆ ಸಲ್ಲಿಸಿ ನಂತರ ಗ್ರಾಮದ ಯುವಕರು ತಲೆಯ ಮೇಲೆ ಬಸವನ ವಿಗ್ರಹವನ್ನು ಹೊತ್ತು, ತಮಟೆ ಹೊಡೆಯುತ್ತಾ, ಗ್ರಾಮದ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು.
ಈ ವೇಳೆ ಪ್ರತಿ ಮನೆ, ಮನೆಯವರು ಬಸವನಿಗೆ ಪೂಜೆ ಸಲ್ಲಿಸಿ, ಬಸವ ಹೊತ್ತಿದ್ದ ಯುವಕನ ಮೇಲೆ ನೀರು ಉಯ್ದರು, ಯುವಕರು ಮತ್ತು ಮಕ್ಕಳು ಮೆರವಣಿಗೆ ಉದ್ದಕ್ಕೂ ಉಯ್ಯೋ ಉಯ್ಯೋ ಮಳೆರಾಯ, ಹೂವಿನ ತೋಟಕ್ಕೆ ನೀರಿಲ್ಲ....
ಬಾರೋ ಬಾರೋ ಮಳೆರಾಯ, ಬಾಳೆ ತೋಟಕ್ಕೆ ನೀರಿಲ್ಲ ಎಂದು ಹಾಡುತ್ತಾ ಸಾಗಿದರು.
PublicNext
14/04/2026 10:30 pm
LOADING...