ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಾಮರಾಜನಗರ : 33 ದಿನಗಳಲ್ಲೇ ಕೋಟ್ಯಾಧಿಪತಿಯಾದ ಮಲೆ ಮಹದೇಶ್ವರ - 3.13 ಕೋಟಿ ರೂ ಕಾಣಿಕೆ ಸಂಗ್ರಹ !

ಚಾಮರಾಜನಗರ : 33 ದಿನಗಳ ಅಂತರದಲ್ಲಿ 3.13 ಕೋಟಿ ರೂಪಾಯಿಗಳಿಗೂ ಅಧಿಕ ಕಾಣಿಕೆಯು ಪವಾಡ ಪುರುಷ ಮಲೆ ಮಹದೇಶ್ವರ ಬೆಟ್ಟದ ಹುಂಡಿಯಲ್ಲಿ ಸಂಗ್ರಹವಾಗಿ ದಾಖಲೆ ನಿರ್ಮಾಣವಾಗಿದೆ.

ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಮಲೆ ಮಹದೇಶ್ವರ ಬೆಟ್ಟದ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದಲ್ಲಿ ಶ್ರೀ ಸಾಲೂರು ಬೃಹನ್ಮಠಾಧಿಪತಿ ಶಾಂತಮಲ್ಲಿಕಾರ್ಜುನಸ್ವಾಮಿ, ಕಾರ್ಯದರ್ಶಿ ರಘು ರವರ ನೇತೃತ್ವದಲ್ಲಿ ಹುಂಡಿ ಎಣಿಕೆ ಕಾರ್ಯ ನಡೆಯಿತು.

33 ದಿನಗಳಲ್ಲಿ 3,06,23,904 ಹಾಗೂ ಈ ಹುಂಡಿಯಲ್ಲಿ 6,88,214 ರೂಪಾಯಿಗಳು ಸೇರಿದಂತೆ ಒಟ್ಟು ಮೊತ್ತ ರೂ.3,13,12,118 ರೂಪಾಯಿಗಳು ಹಾಗೂ ಚಿನ್ನ 64 ಗ್ರಾಂ, ಬೆಳ್ಳಿ 2 ಕೆಜಿ 50 ಗ್ರಾಂ ಹುಂಡಿಯಲ್ಲಿ ಸಂಗ್ರಹವಾಗಿದೆ. ನಾಲ್ಕು ವಿದೇಶಿ ನೋಟುಗಳು ಹಾಗೂ ಚಲಾವಣೆಯಿಲ್ಲದ ದೇಶದ ೨ ಸಾವಿರ ರೂಪಾಯಿ ಮುಖಬೆಲೆಯ ಆರು ನೋಟುಗಳು ಸಹ ದೊರೆತಿವೆ.

ಹುಂಡಿ ಎಣಿಕೆ ಕಾರ್ಯದಲ್ಲಿ ಪ್ರಾಧಿಕಾರದ ನಾಮನಿರ್ದೇಶಿತ ಸದಸ್ಯರಾದ ಮರಿಸ್ವಾಮಿ, ಭಾಗ್ಯಮ್ಮ, ಕುಪ್ಯಾ , ಕುಮಾರ್ ವಿಜಯ್ ರಾವಂದೂರು, ಪ್ರಾಧಿಕಾರದ ಹಣಕಾಸು ಮತ್ತು ಲೆಕ್ಕ ಪತ್ರ ಸಲಹೆಗಾರ ಮಹದೇವು, ಉಪ ಕಾರ್ಯದರ್ಶಿ ಚಂದ್ರಶೇಖರ.ಜಿ.ಎಲ್ ಹಾಗೂ ಚಾಮರಾಜನಗರ ಜಿಲ್ಲಾಡಳಿತ ಕಚೇರಿಯ ಭಾರತಿ, ಹಿರಿಯ ಬೆರಳಚ್ಚುಗಾರರು ಹಾಗೂ ಪ್ರಾಧಿಕಾರದ ಸಿಬ್ಬಂದಿಗಳು, ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಹಾಗೂ ಕೊಳ್ಳೇಗಾಲದ ಬ್ಯಾಂಕ್ ಆಫ್ ಬರೋಡ ಮುಖ್ಯ ವ್ಯವಸ್ಥಾಪಕರು, ಸಿಬ್ಬಂದಿಗಳು ಹಾಜರಿದ್ದರು.

Edited By :
PublicNext

PublicNext

30/04/2026 07:09 pm

Cinque Terre

3.6 K

Cinque Terre

0

ಸಂಬಂಧಿತ ಸುದ್ದಿ