ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಾಮರಾಜನಗರ : ಗಾಂಧಿವಾದ ಮೆರೆದ ನೂತನ ಶಿಕ್ಷಕ: ಮೊದಲ ದಿನವೇ ಶೌಚಾಲಯ ಸ್ವಚ್ಛಗೊಳಿಸಿ ಮಾದರಿ

ಚಾಮರಾಜನಗರ : ಗುಂಡ್ಲುಪೇಟೆ ತಾಲೂಕಿನ ಕುಂದಕೆರೆ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ, ವರ್ಗಾವಣೆಗೊಂಡು ಬಂದ ಮೊದಲ ದಿನವೇ ಶಿಕ್ಷಕ ಮಹಾದೇಶ್ವರಸ್ವಾಮಿ ಅವರು ಶೌಚಾಲಯವನ್ನು ಸ್ವಚ್ಛಗೊಳಿಸುವ ಮೂಲಕ ಗಾಂಧಿವಾದವನ್ನು ಪ್ರದರ್ಶಿಸಿದ್ದಾರೆ.

ಹೊಂಗಳ್ಳಿ ಶಾಲೆಯಿಂದ ಕುಂದಕೆರೆಗೆ ವರ್ಗಾವಣೆಗೊಂಡ ಅವರು, ಸ್ವಚ್ಛತೆ ಮತ್ತು ಪರಿಸರಕ್ಕೆ ಆದ್ಯತೆ ನೀಡುವ ತಮ್ಮ ನಿಲುವನ್ನು ಈ ಮೂಲಕ ಪ್ರದರ್ಶಿಸಿ ಜನರ

ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಈ ಹಿಂದೆಯೂ ಹೊಂಗಳ್ಳಿ ಶಾಲೆಯಲ್ಲಿ ಶಿಕ್ಷಕರಾಗಿದ್ದ ವೇಳೆ ಶಾಲೆಯ ಆವರಣದಲ್ಲಿ ಉತ್ತಮ ಪರಿಸರ ನಿರ್ಮಾಣ ಮಾಡುವ ಸಲುವಾಗಿ ವಿವಿಧ ಬಗೆಯ ಹೂವಿನ ಗಿಡಗಳು ಹಾಗೂ ಹಣ್ಣಿನ ಗಿಡ ಬೆಳೆಸಿದ್ದರು. ಇದರಿಂದ ಶಾಲೆಯ ವಾತಾವರಣ ಹಸಿರಾಗಿ ಕಂಡು ಬಂದಿತ್ತು.

Edited By : Vinayak Patil
Kshetra Samachara

Kshetra Samachara

16/04/2026 05:30 pm

Cinque Terre

400

Cinque Terre

0

ಸಂಬಂಧಿತ ಸುದ್ದಿ