ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿಯಲ್ಲಿ ಮಳೆ ಅಬ್ಬರ: ಕೆರೆಗಳಾದ ರಸ್ತೆಗಳು, ಜನಜೀವನ ಅಸ್ತವ್ಯಸ್ತ!

ಹುಬ್ಬಳ್ಳಿ: ಹುಬ್ಬಳ್ಳಿ ನಗರ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಭಾರಿ ಗುಡುಗು, ಸಿಡಿಲು ಸಹಿತ ರಭಸದ ಮಳೆ ಸುರಿದಿದ್ದು, ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ಕೇವಲ ಅರ್ಧ ಗಂಟೆಗೂ ಹೆಚ್ಚು ಕಾಲ ಸುರಿದ ಮಳೆಯಿಂದಾಗಿ ಬಹುತೇಕ ರಸ್ತೆಗಳು ಕೆರೆಯಂತಾಗಿ ಜಲಾವೃತಗೊಂಡಿದ್ದವು. ನಗರದ ಜನತಾ ಬಜಾರ್, ಕೊಪ್ಪೀಕರ ರಸ್ತೆ, ದಾಜೀಬಾನ್ ಪೇಟೆಯಂತಹ ಪ್ರಮುಖ ವಾಣಿಜ್ಯ ಪ್ರದೇಶಗಳಲ್ಲಿಯೂ ನೀರು ನಿಂತು ವಾಹನ ಸವಾರರು ಪರದಾಡುವಂತಾಯಿತು. ಮನೆಗಳಿಗೆ ನೀರು ನುಗ್ಗಿದ ಪರಿಣಾಮವಾಗಿ, ವಿಶೇಷವಾಗಿ ಸ್ಲಂ ನಿವಾಸಿಗಳು ತೀವ್ರ ಸಂಕಷ್ಟಕ್ಕೆ ಸಿಲುಕಿದರು.

ಬಿಸಿಲಿಗೆ ತಂಪು, ಆದರೆ ಅವ್ಯವಸ್ಥೆ

ಕಳೆದ ಒಂದು ವಾರದಿಂದ ಸುಡುತ್ತಿದ್ದ ಬಿರುಬಿಸಿಲಿನಿಂದ ಬಳಲಿದ್ದ ಜನರಿಗೆ ಈ ಮಳೆಯು ತುಸು ತಂಪು ನೀಡಿತಾದರೂ, ಮಳೆಯ ಅಬ್ಬರಕ್ಕೆ ನಗರದ ಚರಂಡಿಗಳು ಮತ್ತು ಗಟರ್‌ಗಳು ತುಂಬಿ ಹರಿಯಲಾರಂಭಿಸಿ, ಅನೇಕ ಕಡೆಗಳಲ್ಲಿ ಬ್ಲಾಕ್ ಆಗಿದ್ದರಿಂದ ನೀರು ಸರಿಯಾಗಿ ಹರಿದು ಹೋಗದೆ ಅವ್ಯವಸ್ಥೆ ಸೃಷ್ಟಿಯಾಯಿತು.

Edited By : Vinayak Patil
Kshetra Samachara

Kshetra Samachara

22/04/2026 08:15 am

Cinque Terre

39.34 K

Cinque Terre

2

ಸಂಬಂಧಿತ ಸುದ್ದಿ