ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಿಸಿಲಿನ ತಾಪಕ್ಕೆ ಬೆಂಡಾದ ಹುಬ್ಬಳ್ಳಿಯ ಜನರು - ಏನ ಬಿಸಲೈತ್ರಿ.. ಸಾಕಾಗಿ ಹೋಗೈತಿ ನೋಡ್ರಿ..!

ಹುಬ್ಬಳ್ಳಿ: ದಿನದಿಂದ ದಿನಕ್ಕೆ ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಬಿಸಿಲಿನ ತಾಪಮಾನ ಹೆಚ್ಚಾಗುತ್ತಲೇ ಸಾಗಿದೆ. ಬಿಸಿಲಿನ ಹೊಡೆತಕ್ಕೆ ಹುಬ್ಬಳ್ಳಿಯ ಮಂದಿ ಬೆಂಡಾಗಿ ಭಸವಳಿದು ಹೋಗಿದ್ದಾರೆ. ಮನೆಯಿಂದ ಹೊರಗೆ ಬಾರಲು ಹಿಂದೇಟು ಹಾಕುವಂತ ಪರಿಸ್ಥಿತಿ ನಿರ್ಮಾಣವಾಗಿದೆ.

ಹೌದು.. ಕಳೆದ ಎರಡು ದಿನದಿಂದ ಬಿಸಿಲಿನ ತಾಪಮಾನ 40° ಆಸುಪಾಸಿನಲ್ಲಿದ್ದು, ಮಧ್ಯಾಹ್ನ 12 ಗಂಟೆಯಿಂದ ಸಾಯಂಕಾಲ ನಾಲ್ಕು ಗಂಟೆಯವರೆಗೆ ರಸ್ತೆಗಳು ಖಾಲಿ ಖಾಲಿಯಾಗುತ್ತಿವೆ. ಅಲ್ಲದೇ ಬಿಸಿಲಿನ ತಾಪಕ್ಕೆ ಜನರು ಕಕ್ಕಾಬಿಕ್ಕಿಯಾಗಿದ್ದು, ಎಲ್ಲೆಂದರಲ್ಲಿ ಜನರು ನೆರಳಿನ ಆಸರೆಗಾಗಿ ಪರದಾಡುವಂತಾಗಿದೆ.

ಇನ್ನೂ ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ದಾಖಲೆಯ ತಾಪಮಾನದಿಂದ ಜನರು ಛತ್ರಿ ಮೊರೆ ಹೋಗುತ್ತಿದ್ದಾರೆ. ಅಲ್ಲದೇ ಬಿಸಿಲಿನ ಭಯಕ್ಕೆ ಜನರು ಮನೆಯಿಂದ ಹೊರ ಬರಲು ಕೂಡ ಹಿಂದೇಟು ಹಾಕುವಂತಾಗಿದೆ.

Edited By :
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

22/04/2026 05:39 pm

Cinque Terre

17.64 K

Cinque Terre

0

ಸಂಬಂಧಿತ ಸುದ್ದಿ