ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿರಸಿ: ಬೇಡ್ತಿ-ಅಘನಾಶಿನಿ ಶರಾವತಿ ನದಿ ಕಣಿವೆಗಳ ಸಂರಕ್ಷಣಾ ಸಭೆ ಯಶಸ್ವಿ

ಶಿರಸಿ : ಪರಮಪೂಜ್ಯ ಶ್ರೀ ಶ್ರೀ ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಇತ್ತೀಚೆಗೆ ನಗರದ ಕದಂಬ ಮಾರ್ಕೆಟಿಂಗ್ ಸಭಾಭವನದಲ್ಲಿ ಬೇಡ್ತಿ-ಅಘನಾಶಿನಿ ಶರಾವತಿ ನದಿ ಕಣಿವೆಗಳ ಸಂರಕ್ಷಣಾ ಕುರಿತು ಜನಾಂದೋಲನದ ಸಭೆ ಯಶಸ್ವಿ.ಅಲ್ಲದೆ ಬೇಡ್ತಿ-ಅಘನಾಶಿನಿ ಶರಾವತಿ ನದಿ ಕಣಿವೆಗಳ ಸಂರಕ್ಷಣಾ ಜನಾಂದೋಲನದಿಂದ ಸರ್ಕಾರಗಳ ಮೇಲೆ ಒತ್ತಡ ತರುವಲ್ಲಿ ಈಗಾಗಲೇ ಭಾಗಶಃ ಯಶಸ್ವಿಯಾಗಿದ್ದೇವೆ.

ಮಹತ್ವದ ನಿರ್ಣಯಗಳು

ಸಂಪೂರ್ಣವಾಗಿ ಬೇಡ್ತಿ-ಅಘನಾಶಿನಿ ನದಿ ತಿರುವು ಯೋಜನೆಗಳ ಪ್ರಸ್ತಾವನೆ ಕೈ ಬಿಡುವವರೆಗೂ ನಮ್ಮ ಜನಜಾಗೃತಿ ಅಭಿಯಾನ ಮುಂದುವರೆಸಬೇಕು. ಕರಾವಳಿಯ ಗಂಗಾವಳಿ ಅಘನಾಶಿನಿ ಪ್ರದೇಶದಲ್ಲಿ ಜನ ಸಂಪರ್ಕ ಅಭಿಯಾನ ಚುರುಕುಗೊಳಿಸಬೇಕು,ಕಾರವಾರ ನೌಕಾನೆಲೆ ಅಧಿಕಾರಿಗಳ ಭೇಟಿಯಾಗಿ ಕಾರ್ಯಕ್ರಮ ಶೀಘ್ರವಾಗಿ ನಡೆಯಬೇಕು ಎಂದು ಚರ್ಚಿಸಲಾಯಿತು.ಮತ್ತು ರಾಜ್ಯ ನೀರಾವರಿ ಸಚಿವರ ಜೊತೆ ಸಭೆ ನಡೆದಿದ್ದು ಅಧಿಕಾರಿಗಳು-ತಜ್ಞರ ಜೊತೆ ಸಮಾಲೋಚನಾ ಸಭೆ ಏರ್ಪಡಿಸಲು ಜಿಲ್ಲಾ ಉಸ್ತುವಾರಿ ಸಚಿವರಲ್ಲಿ ಈಗಾಗಲೇ ಕೋರಲಾಗಿದೆ.ಹುಬ್ಬಳ್ಳಿಯಲ್ಲಿ ಪಶ್ಚಿಮ ಘಟ್ಟ ಸಂರಕ್ಷಣಾ ಸಭೆ ಏರ್ಪಡಿಸಬೇಕು.ವಿಜ್ಞಾನಿಗಳ, ಅಧ್ಯಯನಕಾರರ ಇನ್ನೊಂದು ಕಾರ್ಯಾಗಾರ ನಡೆಸಬೇಕು.

ನದಿಗಳ ನೀರಿನ ಪರಿಸ್ಥಿತಿ ಕುರಿತು ವೈಜ್ಞಾನಿಕ ವರದಿ ಸಿದ್ಧಪಡಿಸಬೇಕು, ಎತ್ತಿನಹೊಳೆ ಪ್ರದೇಶಕ್ಕೆ ಭೇಟಿ ನೀಡಬೇಕು,ಬೇಡ್ತಿ - ವರದಾ ಯೋಜನೆ ಸರ್ವೆಗೆ ಅವಕಾಶ ನೀಡದಂತೆ ಜಿಲ್ಲಾ ಅರಣ್ಯ ಅಧಿಕಾರಿಗಳಿಗೆ ಆಗ್ರಹ ಮಾಡಬೇಕು.ಅಲ್ಲದೆ ಎಲ್ಲಾ ಜನಪ್ರತಿನಿಧಿಗಳನ್ನು ಆಹ್ವಾನಿಸಿ ಸಭೆ ನಡೆಸಿಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ಕೇಂದ್ರ ವನ್ಯಜೀವಿ ಅರಣ್ಯ ಇಲಾಖೆ ಒಪ್ಪಿಗೆ ನೀಡಬಾರದು.ಜೂನ್ ೫ ಪರಿಸರ ದಿನಾಚರಣೆ ದಿನದಿಂದ ವ್ಯಾಪಕ ವೃಕ್ಷಾರೋಪಣ ಅಭಿಯಾನ ನಡೆಸಬೇಕು ಎಂದು ಹಲವು ಮಹತ್ವದ ನಿರ್ಣಯ ಕೈಗೊಳ್ಳಲಾಯಿತು.

Edited By : PublicNext Desk
Kshetra Samachara

Kshetra Samachara

22/04/2026 08:15 pm

Cinque Terre

2.56 K

Cinque Terre

0

ಸಂಬಂಧಿತ ಸುದ್ದಿ