ಸಿದ್ದಾಪುರ: ತಾಲೂಕಿನ ಅಣಲೇಬೈಲ್ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬುಧವಾರ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ರೈತರೊಬ್ಬರ ಬದುಕಿನ ಆಧಾರವಾಗಿದ್ದ ಅಡಿಕೆ ತೋಟ ಸಂಪೂರ್ಣವಾಗಿ ನಾಶವಾಗಿದೆ.
ಹೆಗ್ನೂರ್ ನಿವಾಸಿ ಸದಾನಂದ ಹೆಗಡೆ ಅಗ್ನಿ ಅವಘಡ; ಹೆಗ್ನೂರ್‌ನಲ್ಲಿ 300ಕ್ಕೂ ಹೆಚ್ಚು ಅಡಿಕೆ ಮರಗಳು ಬೆಂಕಿಗೆ ಆಹುತಿ
ಸಿದ್ದಾಪುರ: ತಾಲೂಕಿನ ಅಣಲೇಬೈಲ್ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬುಧವಾರ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ರೈತರೊಬ್ಬರ ಬದುಕಿನ ಆಧಾರವಾಗಿದ್ದ ಅಡಿಕೆ ತೋಟ ಸಂಪೂರ್ಣವಾಗಿ ನಾಶವಾಗಿದೆ.
ಹೆಗ್ನೂರ್ ನಿವಾಸಿ ಸದಾನಂದ ಹೆಗಡೆ ಎಂಬುವವರಿಗೆ ಸೇರಿದ ಅಡಿಕೆ ತೋಟಕ್ಕೆ ಬುಧವಾರ ಮಧ್ಯಾಹ್ನದ ವೇಳೆಗೆ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದೆ. ಕ್ಷಣಾರ್ಧದಲ್ಲಿ ತೋಟದಾದ್ಯಂತ ವ್ಯಾಪಿಸಿದ ಬೆಂಕಿಯು ಭೀಕರ ರೂಪ ತಾಳಿದೆ. ಈ ದುರ್ಘಟನೆಯಲ್ಲಿ ಸುಮಾರು 300ಕ್ಕೂ ಹೆಚ್ಚು ಫಸಲು ನೀಡುವ ಅಡಿಕೆ ಮರಗಳು ಹಾಗೂ ಹೊಸದಾಗಿ ನೆಡಲಾಗಿದ್ದ ಗಿಡಗಳು ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಸುಟ್ಟು ಕರಕಲಾಗಿವೆ. ಸುಟ್ಟು ಕರಕಲಾಗಿವೆ.
Kshetra Samachara
22/04/2026 09:07 pm
LOADING...