ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಂಡಿಗುಡ್ಡ ಅರಣ್ಯ ನೌಕರರ ಮೇಲೆ ಜೇನುದಾಳಿ

ಶಿವಮೊಗ್ಗ : ಭದ್ರಾವತಿ ತಾಲೂಕಿನ ಬಂಡಿಗುಡ್ಡ ಅರಣ್ಯ ಪ್ರದೇಶದಲ್ಲಿ ಮೂವರು ಅರಣ್ಯ ದಿನಗೂಲಿ ನೌಕರರು ಹೆಜ್ಜೇನು ದಾಳಿಗೊಳಗಾಗಿದ್ದಾರೆ. ಮೂವರಲ್ಲಿ ಓರ್ವರು ಚಿಂತಾಜನಕ ಸ್ಥಿತಿಯಲ್ಲಿದ್ದರೆ ಮತ್ತಿಬ್ಬರು ಚಿಕಿತ್ಸೆ ಪಡೆದು ಅಪಾಯದಿಂದ ಪಾರಾಗಿ ಹೆಚ್ಚಿನ ಚಿಕಿತ್ಸೆ ಪಡೆಯುತ್ತಿದ್ದಾರೆ.

ಅರಣ್ಯ ಇಲಾಖೆಯ ದಿನಗೂಲಿ ಕೆಲಸಗಾರರಾದ ಉದಯನಗರದ ಕುಮಾರಪ್ಪ (57), ಬಾಪೂಜಿ ನಗರದ ಬಾಬು (34), ಬಂಡಿಗುಡ್ಡದ ಪ್ರದೀಪ (28) ಎಂಬ ಮೂವರು ಬಂಡಿಗುಡ್ಡ ಅರಣ್ಯಕ್ಕೆ ಕೆಲಸಕ್ಕೆ ಹೋಗಿ ಹಿಂತಿರುಗಿ ಬರುವಾಗ ಹೆಜ್ಜೇನು ಹಠಾತ್ ದಾಳಿ ಮಾಡಿವೆ. ಹೆಜ್ಜೇನು ಹೆಚ್ಚು ಕಚ್ಚಿದ ಪರಿಣಾಮ ಕುಮಾರಪ್ಪ ಚಿಂತಾಜನಕ ಸ್ಥಿತಿಯಲ್ಲಿದ್ದು, ಶಿವಮೊಗ್ಗದ ಮ್ಯಾಕ್ಸ್ ಆಸ್ಪತ್ರೆಗೆ ದಾಖಲಿಸಿದ್ದರೆ, ಇನ್ನಿಬ್ಬರು ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Edited By : Nirmala Aralikatti
Kshetra Samachara

Kshetra Samachara

24/04/2026 02:13 pm

Cinque Terre

2.08 K

Cinque Terre

0

ಸಂಬಂಧಿತ ಸುದ್ದಿ