ಹುಬ್ಬಳ್ಳಿ: ಕನ್ನಡ ನಾಡು, ನುಡಿ, ನೆಲ ಮತ್ತು ಜಲದ ರಕ್ಷಣೆ ಪ್ರತಿಯೊಬ್ಬ ಕನ್ನಡಿಗನ ಜವಾಬ್ದಾರಿಯಾಗಿದೆ. ಕನ್ನಡದ ಉಳಿವುಗಾಗಿ ನಾವೆಲ್ಲರೂ ಶ್ರಮಿಸಬೇಕೆಂದು ಕನ್ನಡ ಜಾಗೃತಿ ವೇದಿಕೆ ಇಂದು ಸಭೆ ಮಾಡಿದರು.
ಹುಬ್ಬಳ್ಳಿಯ ಪ್ರವಾಸಿ ಮಂದಿರದಲ್ಲಿ ಸಭೆ ಮಾಡಿದ ಕನ್ನಡ ಜಾಗೃತಿ ನಾಡಿನ ರಕ್ಷಣೆಗೆ ಕೆಲ ಪ್ರಮುಖ ನಿರ್ಣಯ ಕೈಗೊಂಡರು. ವಲಸಿಗರ ನಿಯಂತ್ರಣ ಕಾಯ್ದೆ ಜಾರಿಯಾಗಬೇಕು, ಖಾಸಗಿ ಶಾಲೆಗಳ ಎಲ್ಲಾ ಪಠ್ಯಗಳಲ್ಲಿ ಕನ್ನಡ ಕಡ್ಡಾಯವಾಗಿ ಬೋಧಿಸಬೇಕು, ಕನ್ನಡ ಕಡೆಗಣಿಸುವ ಯಾವುದೇ ಶಾಲೆಯ ಮಾನ್ಯತೆ ರದ್ದು ಮಾಡಬೇಕು, ಖಾಸಗಿ ಶಾಲೆಗಳಲ್ಲಿ ನಾಡಗೀತೆ ಕಡ್ಡಾಯವಾಗಿ ಹಾಡಿಸಬೇಕು, ಖಾಸಗಿ ಕ್ಷೇತ್ರದ ಎಲ್ಲಾ ಉದ್ದಿಮೆಗಳಲ್ಲಿ ಕನ್ನಡಿಗರಿಗೆ ಶೇ 75 ರಷ್ಟು ಉದ್ಯೋಗ ಮೀಸಲಾತಿ ನೀಡಬೇಕೆಂದು ಒತ್ತಾಯಿಸಿದರು.
Kshetra Samachara
28/04/2026 04:15 pm
LOADING...