ಹುಬ್ಬಳ್ಳಿ : ನಗರದ ಹೊಸೂರು ಬಳಿ ಕ್ಷುಲ್ಲಕ ಕಾರಣಕ್ಕೆ ಇಸ್ತ್ರಿ ಮಾಡುವ ಬಡ ವ್ಯಕ್ತಿಯೊಬ್ಬರ ಮೇಲೆ ನಿಖಿಲ್ ದಾಂಡೇಲಿ ಎಂಬಾತ ಹಲ್ಲೆ ನಡೆಸಿದ್ದು, ಈ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸ್ಪಷ್ಟವಾಗಿ ಸೆರೆಯಾಗಿದೆ.
ಹೌದು ಇಸ್ತ್ರಿ ಮಾಡಿ ಜೀವನ ಸಾಗಿಸುತ್ತಿದ್ದ ಪರಶುರಾಮ ಬೆಳಗಲಿ ಎಂಬುವರ ಮೇಲೆ ನಿಖಿಲ್ ದಾಂಡೇಲಿ ಎನ್ನುವ ವ್ಯಕ್ತಿ ಹಲ್ಲೆ ನಡೆಸಿದ್ದಾನೆ. ತನ್ನ ಬಟ್ಟೆಯನ್ನು ಸಮಯಕ್ಕೆ ಸರಿಯಾಗಿ ಇಸ್ತ್ರಿ ಮಾಡಿಕೊಡಲಿಲ್ಲ ಮತ್ತು ಫೋನ್ ಕರೆ ಸ್ವೀಕರಿಸಲಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಸಿಟ್ಟಾದ ನಿಖಿಲ್ ಹೋಟೆಲ್‌ನಲ್ಲಿ ಚಹಾ ಕುಡಿಯುತ್ತಿದ್ದ ಪರಶುರಾಮನ ಬಳಿ ಹೋಗಿ ಆತನ ಮೊಬೈಲ್ ಕಿತ್ತುಕೊಂಡು ಅದನ್ನು ಒಡೆದು ಹಾಕಿದ್ದಾನೆ. ನಂತರ, ಪರಶುರಾಮನ ಮೇಲೆ ಹಲ್ಲೆ ನಡೆಸಿದ್ದು, ಈ ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಇನ್ನೂ ಹಲ್ಲೆಗೊಳಗಾದ ಪರಶುರಾಮ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು, ತನಗೆ ಜೀವ ಬೆದರಿಕೆ ಇರುವ ಕಾರಣ ಪೊಲೀಸರು ರಕ್ಷಣೆ ನೀಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ. ಈ ಘಟನೆ ಹುಬ್ಬಳ್ಳಿಯ ವಿದ್ಯಾನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಸೂಕ್ತ ತನಿಖೆ ನಡೆಸಿ ಅಮಾಯಕರ ಮೇಲೆ ನಡೆಯುವ ಇಂತಹ ದೌರ್ಜನ್ಯಗಳನ್ನು ತಡೆಯಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಕ್ಯಾಮೆರಾ ಪರ್ಸನ್ ಗಜಾನನ ಹೂಗಾರ ಜೊತೆ, ಈರಣ್ಣ ವಾಲಿಕಾರ, ಕ್ರೈಮ್ ಬ್ಯೂರೋ, ಪಬ್ಲಿಕ್ ನೆಕ್ಸ್ಟ್, ಹುಬ್ಬಳ್ಳಿ.
Kshetra Samachara
28/04/2026 06:08 pm
LOADING...